

ಪ್ರಮುಖ ಮುಖ್ಯಾಂಶಗಳು
ಲಕ್ಷಾಂತರ ಜನರ ಪ್ರಾಣತ್ಯಾಗದಿಂದ ರೂಪುಗೊಂಡ ಬಾಂಗ್ಲಾದೇಶ ಇಂದು ಸಂಪೂರ್ಣವಾಗಿ ಬದಲಾಗಿದೆ. ಇದು ನಾವು ಕನಸು ಕಂಡ ಬಾಂಗ್ಲಾದೇಶವಲ್ಲ, ಇಲ್ಲಿ ಜನಸಾಮಾನ್ಯರಿಗೆ ಈಗ ನೆಮ್ಮದಿಯಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಸರ್ಕಾರವು ಸಮಸ್ಯೆಯನ್ನು ಶಾಂತಿಯುತವಾಗಿ, ಮಾತುಕತೆ ಮೂಲಕ ಬಗೆಹರಿಸಲು ಸಾಕಷ್ಟು ಪ್ರಯತ್ನ ಪಟ್ಟಿತ್ತು. ಆದರೆ ವಿರೋಧಿಗಳು ಪ್ರತಿಭಟನೆಯನ್ನು ಹಿಂಸೆಯ ಮಾರ್ಗವನ್ನಾಗಿ ಬಳಸಿಕೊಂಡರು ಎಂದಿದ್ದಾರೆ.
ದೇಶದಲ್ಲಿ ತಮ್ಮ ಪಕ್ಷ ಅವಾಮಿ ಲೀಗ್ನ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಭೀಕರ ದಾಳಿಗಳು ನಡೆಯುತ್ತಿವೆ. ಈಗಾಗಲೇ ಸುಮಾರು 10,000ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಹತ್ಯೆಯಾಗಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಗಂಭೀರವಾಗಿ ಬಾಧಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.