ಭಾರತದಲ್ಲಿ ತಾತ್ಕಾಲಿಕ ಟೆಲಿಗ್ರಾಮ್ ನಿಷೇಧದಲ್ಲಿ ರಿಲಯನ್ಸ್ ಮತ್ತು ವಾಟ್ಸಾಪ್ ಪಾತ್ರವಿದೆ ಎಂದು ಆರೋಪಿಸಿದ ಟೆಲಿಗ್ರಾಮ್ ಸಿಇಒ | Telegram CEO

ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್
ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್
Published on
ನವದೆಹಲಿ: ನೀಟ್ ಮರು ಪರೀಕ್ಷೆ ಹಿನ್ನೆಲೆ ಜೂ. 22ರವರೆಗೆ ಭಾರತದಲ್ಲಿ ತಾತ್ಕಾಲಿಕವಾಗಿ ಟೆಲಿಗ್ರಾಮ್ ಅನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದ್ದು, ತಮ್ಮ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಅನ್ನು ನಿಷೇಧಿಸುವ ಪ್ರಯತ್ನಗಳಲ್ಲಿ ರಿಲಯನ್ಸ್ ಗ್ರೂಪ್ ಮತ್ತು ವಾಟ್ಸಾಪ್ ಭಾಗಿಯಾಗಿರಬಹುದು ಎಂದು ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್(Telegram CEO) ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, BGP ಹೈಜಾಕಿಂಗ್ ಎಂದು ಕರೆಯಲ್ಪಡುವ ತಂತ್ರದ ಮೂಲಕ ಟೆಲಿಗ್ರಾಮ್‌ನ ಸಂಪರ್ಕದಲ್ಲಿ ಹಸ್ತಕ್ಷೇಪ ಮಾಡಲು ರಿಲಯನ್ಸ್ ಕಮ್ಯುನಿಕೇಷನ್ಸ್ ಕಾರಣವಾಗಿದೆ. ಭಾರತೀಯ ಟೆಲಿಕಾಂ ರಿಲಯನ್ಸ್, ಬಿಜಿಪಿ ಹೈಜಾಕಿಂಗ್ ಎಂಬ ರಾಕ್ಷಸ ವಿಧಾನದ ಮೂಲಕ ಭಾರತದ ಹೊರಗಿನ ಯುಎಇ ಸೇರಿದಂತೆ ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಮ್ ಪ್ರವೇಶವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ವಾಟ್ಸಾಪ್‌ನ ಹಿಂದಿರುವ ಕಂಪನಿಯಾದ ಮೆಟಾ ರಿಲಯನ್ಸ್‌ನ ಭಾಗಶಃ ಒಡೆತನವನ್ನು ಹೊಂದಿರುವುದರಿಂದ ಇದು ಸ್ಪರ್ಧಾತ್ಮಕ ಯುದ್ಧದ ಭಾಗವಾಗಿರಬಹುದು. ಭಾರತದಲ್ಲಿ ಟೆಲಿಗ್ರಾಮ್ ವಿರುದ್ಧದ ಇತ್ತೀಚಿನ ಕ್ರಮಗಳ ಹಿಂದೆಯೂ ಅದೇ ಸಂಸ್ಥೆಗಳ ಕೈವಾಡವಿದೆ ಎಂದು ಅನುಮಾನಿಸಿದ್ದಾರೆ.
ಜಾಗತಿಕ ಇಂಟರ್ನೆಟ್ ರೂಟಿಂಗ್‌ನ ಇಂತಹ ದುರುಪಯೋಗವು ಆತಂಕಕಾರಿಯಾಗಿದೆ. ಭಾರತದಲ್ಲಿ ಟೆಲಿಗ್ರಾಮ್ ಅನ್ನು ನಿಷೇಧಿಸುವ ಇತ್ತೀಚಿನ ಲಾಬಿ ಪ್ರಯತ್ನದ ಹಿಂದೆ ರಿಲಯನ್ಸ್/ವಾಟ್ಸಾಪ್ ಕೂಡ ಇದ್ದರೆ ನನಗೆ ಆಶ್ಚರ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಆರೋಪ ನಿರಾಕರಿಸಿದ ರಿಲಯನ್ಸ್​ ಮೂಲ

ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಆರೋಪವನ್ನು ತಳ್ಳಿ ಹಾಕಿರುವ ರಿಲಯನ್ಸ್ ಮೂಲದ ಅತ್ಯಾಪ್ತರು, ಅದೊಂದು ನಕಲಿ ಸುದ್ದಿ, ಡುರೋವ್ ಅವರು ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಅನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಡಿಜಿಟಲ್ ವಿಭಾಗ ಜಿಯೋ ಜೊತೆ ಗೊಂದಲಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಜಿಯೋದಲ್ಲಿ ಮೆಟಾ ಅಲ್ಪ ಪಾಲನ್ನು ಹೊಂದಿದ್ದರೂ, ಸಬ್‌ಸೀ ಕೇಬಲ್ ಕಾರ್ಯಾಚರಣೆಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಭಾಗವಲ್ಲದ ಪ್ರತ್ಯೇಕ ಘಟಕವಾದ ರಿಲಯನ್ಸ್ ಕಮ್ಯುನಿಕೇಷನ್ಸ್ ನಿರ್ವಹಿಸುತ್ತದೆ. ಆದಾಗ್ಯೂ, ಮೆಟಾ ಕುರಿತು ಅವರು ಮಾಡುತ್ತಿರುವ ಆರೋಪಗಳು ಸಂಪೂರ್ಣವಾಗಿ ವಿಭಿನ್ನ ಕಂಪನಿಯಾದ ಜಿಯೋಗೆ ಸಂಬಂಧಿಸಿವೆ. ಇವು ಪ್ರತ್ಯೇಕ ಘಟಕಗಳು ಎಂದು ತಿಳಿಸಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net