ಅದು ಶ್ವೇತಪತ್ರವಲ್ಲ, ಖಾಲಿ ಪತ್ರ: ಟಿವಿಕೆ ಸರ್ಕಾರ ಬಿಡುಗಡೆ ಮಾಡಿದ ಶ್ವೇತಪತ್ರದ ವಿರುದ್ಧ ಡಿಎಂಕೆ ವಾಗ್ದಾಳಿ | DMK
ಎಂ.ಕೆ.ಸ್ಟಾಲಿನ್ ಮತ್ತು ಸಿಎಂ ವಿಜಯ್
Published on:
Copied
Follow Us
ಚೆನ್ನೈ: ತಮಿಳುನಾಡಿನಲ್ಲಿ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಬಿಡುಗಡೆ ಮಾಡಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯ ಶ್ವೇತ್ರಪತ್ರದ ಕುರಿತು ಪ್ರತಿಕ್ರಯಿಸಿರುವ ವಿಪಕ್ಷ ಡಿಎಂಕೆ, ಅದು ಶ್ವೇತಪತ್ರವಲ್ಲ, ಅದೊಂದು ಖಾಲಿ ಪತ್ರ ಎಂದು ವಾಗ್ದಾಳಿ ನಡೆಸಿದೆ.
ಈ ಕುರಿತು ಮಂಗಳವಾರ(ಜೂ. 16) ಹೇಳಿಕೆ ಬಿಡುಗಡೆ ಮಾಡಿರುವ ಡಿಎಂಕೆ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಡಿಎಂಕೆ ನಾಯಕ ತಂಗಮ್ ತೆನರಸು, ಸರ್ಕಾರ ಬಿಡುಗಡೆ ಮಾಡಿದ ಶ್ವೇತಪತ್ರ ಹೆಸರಿಗಷ್ಟೇ ಶ್ವೇತಪತ್ರ. ಇದನ್ನು ಸರ್ಕಾರ ತಾನೂ ನೀಡಿದ ಈಡೇರದ ಚುನಾವಣಾ ಭರವಸೆಗಳನ್ನು ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ಮರೆಮಾಚಲು ಬಳಸುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಬಜೆಟ್ ಮಂಡನೆ ಸಂದರ್ಭದಲ್ಲಿ ತಮಿಳುನಾಡಿನ ಆರ್ಥಿಕ ಸ್ಥಿತಿಯನ್ನು ಈಗಾಗಲೇ ಸ್ಪಷ್ಟವಾಗಿ ಮತ್ತು ವಿವರವಾಗಿ ವಿವರಿಸಲಾಗಿದೆ. ಪ್ರಸ್ತುತ ಸರ್ಕಾರವು ಸಾರ್ವಜನಿಕರಿಗೆ ಪಟಾಕಿ ಸಿಡಿಸುವಂತಹ ಭರವಸೆಗಳನ್ನು ನೀಡುವ ಮೂಲಕ ಅಧಿಕಾರಕ್ಕೆ ಬಂದಿದೆ. ಆದರೆ ಆಡಳಿತಾತ್ಮಕ ಅಸಮರ್ಥತೆಯಿಂದಾಗಿ ಅವುಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ.
ಆಳ ತಿಳಿಯದೆ ಆಳದ ನೀರಿಗೆ ಕಾಲಿಟ್ಟ ಈ ಸರ್ಕಾರ ಈಗ ತನ್ನ ಭರವಸೆಗಳನ್ನು ಈಡೇರಿಸಲು ಸಂಪೂರ್ಣವಾಗಿ ಅಸಮರ್ಥವಾಗಿದೆ. ತನ್ನ ಭವ್ಯ ಭರವಸೆಗಳು ನೆಲಕಚ್ಚಿವೆ ಎಂಬ ಅಂಶವನ್ನು ಮರೆಮಾಚಲು, ಶ್ವೇತಪತ್ರ ಹೆಸರಿನಲ್ಲಿ ಪ್ರಚಾರವನ್ನು ಸೃಷ್ಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವರದಿಯು ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ಮತ್ತು ಈಡೇರದ ಬದ್ಧತೆಗಳ ಮೇಲಿನ ಟೀಕೆಗಳನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವಾಗಿದೆ. ಭರವಸೆ ನೀಡಿದ ಕಲ್ಯಾಣ ಕ್ರಮಗಳ ಅನುಷ್ಠಾನಕ್ಕೆ ಒತ್ತಾಯಿಸಿ ನಾಗರಿಕರು ಪ್ರತಿಭಟನೆಗಳನ್ನು ಪ್ರಾರಂಭಿಸಬಹುದು ಎಂಬ ಭಯದ ನಡುವೆ ಶ್ವೇತಪತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಸರ್ಕಾರ ಬಿಡುಗಡೆ ಮಾಡಿರುವ ವರದಿಗೆ ವಿವರವಾದ ಮತ್ತು ಸಮಗ್ರವಾದ ಖಂಡನೆಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
13 ಲಕ್ಷ ಕೋಟಿ ಸಾಲ
ಮಂಗಳವಾರ ತಮಿಳುನಾಡು ಹಣಕಾಸು ಸಚಿವೆ ಮೇರಿ ವಿಲ್ಸನ್ ರಾಜ್ಯದ ಹಣಕಾಸಿನ ಕುರಿತು ಶ್ವೇತಪತ್ರ ಬಿಡುಗಡೆ ಮಾಡಿದ್ದರು. ಅದರಲ್ಲಿ ತಮಿಳುನಾಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸುಮಾರು 13 ಲಕ್ಷ ಕೋಟಿ ಮೊತ್ತದ ಭಾರಿ ಸಾಲದ ಸುಳಿಗೆ ಸಿಲುಕಿದೆ ಎಂಬ ಆಘಾತಕಾರಿ ಮಾಹಿತಿ ಹೊರಗಡೆವಿದ್ದರು. ಇದಕ್ಕೆ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಹಿಂದಿನ ಡಿಎಂಕೆ ಆಡಳಿತವೇ ಈ ಪರಿಸ್ಥಿತಿಗೆ ಕಾರಣ ಎಂದು ಟೀಕಿಸಿದ್ದರು (ಏಜೆನ್ಸೀಸ್).