ಸರಣಿಯಾಗಿ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಟೀಕೆ: ತಮಿಳು ರೈಟ್ವಿಂಗ್ ಯೂಟ್ಯೂಬರ್ ಮರಿದಾಸ್ ಬಂಧನ| YouTuber Maridas
ಮರಿದಾಸ್ ಮತ್ತು ಸಿಎಂ ವಿಜಯ್
Published on:
Copied
Follow Us
ಚೆನ್ನೈ: ತಮಿಳುನಾಡಿನಲ್ಲಿ ಹೊಸದಾಗಿ ರಚನೆಯಾಗಿರುವ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಮತ್ತು ಸಂಪುಟದ ಹಲವು ಸಚಿವರನ್ನು ಗುರಿಯಾಗಿಸಿ ಸರಣಿಯಾಗಿ ಟೀಕಿಸಿ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ತಮಿಳು ರೈಟ್ವಿಂಗ್ ಯೂಟ್ಯೂಬರ್ ಮರಿದಾಸ್(YouTuber Maridas) ಅವರನ್ನು ಸೋಮವಾರ(ಜೂ. 08) ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಗುರಿಯಾಗಿಸಿಕೊಂಡು ನಿರಂತರ ಆರೋಪಗಳು ಮತ್ತು ವಿಮರ್ಶಾತ್ಮಕ ವ್ಯಾಖ್ಯಾನಗಳಿಗಾಗಿ ಚೆನ್ನೈ ಪೊಲೀಸರ ಸೈಬರ್ ಅಪರಾಧ ವಿಭಾಗವು ಯೂಟ್ಯೂಬರ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ಹಿನ್ನೆಲೆ ಇಂದು ಬೆಳಗ್ಗೆ ಚೆನ್ನೈನಿಂದ ವಿಶೇಷ ಸೈಬರ್ ಅಪರಾಧ ತಂಡವು ಮಧುರೈಗೆ ಆಗಮಿಸಿ ಮಧುರೈ ನಗರ ಪೊಲೀಸರ ಸಹಕಾರದೊಂದಿಗೆ, ಮರಿದಾಸ್ ಅವರನ್ನು ಸೂರ್ಯನಗರದಲ್ಲಿರುವ ಅವರ ಮನೆಯಲ್ಲಿಯೇ ಬಂಧಿಸಿ, ಹೆಚ್ಚಿನ ವಿಚಾರಣೆಗೆ ಚೆನ್ನೈಗೆ ಕರೆದೊಯ್ಯಲಾಗುತ್ತಿದೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸೈಬರ್ ಅಪರಾಧ ವಿಭಾಗವು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಯೂಟ್ಯೂಬರ್‌ನನ್ನು ಬಂಧಿಸಲಾಗಿದೆ. ತನಿಖೆಯ ಬಳಿಕ ಯೂಟ್ಯೂಬರ್ ಮೇಲೆ ಯಾವ ನಿರ್ದಿಷ್ಟ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮರಿದಾಸ್ ಅವರು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಭಾರಿ ಅನುಯಾಯಿಗಳನ್ನು ಹೊಂದಿದ್ದಾರೆ. ಮತ್ತು ಬಲಪಂಥಿಯ ಸಿದ್ದಾಂತದ ಪ್ರತಿಪಾದಕರಾಗಿದ್ದಾರೆ. ಇತ್ತೀಚೆಗೆ ಟಿವಿಕೆ ಸಚಿವರಾದ ಕೀರ್ತನಾ ಸೇರಿ ಹಲವು ಸಚಿವರು ಮತ್ತು ಶಾಸಕರ ವಿರುದ್ಧ ಅವರು ಚುನಾವಣೆಯಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ಡಿಎಂಕೆ ಅಧಿಕಾರವಧಿಯಲ್ಲೂ ತಮ್ಮ ರಾಜಕೀಯ ವ್ಯಾಖ್ಯಾನಕ್ಕಾಗಿ ವಿವಾದಕ್ಕೆ ಗುರಿಯಾಗಿದ್ದರು (ಏಜೆನ್ಸೀಸ್).