ತಮಿಳುನಾಡಿನ ಎಲ್ಲಾ ಶಾಸಕರಿಗೆ ಸಿಎಂ ವಿಜಯ್ ಭರ್ಜರಿ ಕೊಡುಗೆ: ಹೊಸ ಕಾರು, 75 ಸಾವಿರ ರೂ. ಚಾಲಕ ಭತ್ಯ ಘೋಷಣೆ | CM Vijay

ಸಿಎಂ ವಿಜಯ್
ಸಿಎಂ ವಿಜಯ್
Published on
ಚೆನ್ನೈ: ತಮಿಳುನಾಡು ಸಿಎಂ ಸಿ.ಜೋಸೆಫ್ ವಿಜಯ್(CM Vijay) ಅವರು, ರಾಜ್ಯದ ಎಲ್ಲಾ ಶಾಸಕರಿಗೆ ಭರ್ಜರಿ ಕೊಡುಗೆ ನೀಡಿದ್ದು, ಪಕ್ಷಾತೀತವಾಗಿ ಪ್ರತಿಯೊಬ್ಬ ಶಾಸಕರಿಗೂ ಹೊಸ ಕಾರುಗಳನ್ನು ನೀಡಲಾಗುವುದು ಮತ್ತು ಅದಕ್ಕೆ 75 ಸಾವಿರ ರೂ. ಚಾಲಕ ಭತ್ಯೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಬುಧವಾರ(ಆ. 19) ಮಾತನಾಡಿರುವ ಅವರು, ಜನರ ಅಗತ್ಯಗಳನ್ನು ಗಮನಿಸಲು ಶಾಸಕರು ತಮ್ಮ ಕ್ಷೇತ್ರಗಳಿಗೆ ನಿಯಮಿತವಾಗಿ ಪ್ರಯಾಣಿಸಬೇಕಾಗುತ್ತದೆ. ಈ ಪ್ರಯಾಣಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಸರ್ಕಾರವು ಎಲ್ಲಾ ಶಾಸಕರಿಗೂ ಕಾರುಗಳನ್ನು ಒದಗಿಸಲಿದೆ ಎಂದು ಹೇಳಿದ್ದಾರೆ.
ಜೊತೆಗೆ ಸರ್ಕಾರ ಘೋಷಿಸಿರುವ ಯೋಜನೆಯಡಿ, ಕಾರು ಚಾಲಕನ ಸಂಬಳ ಮತ್ತು ಡೀಸೆಲ್ ಸೇರಿ ಇತರೆ ವೆಚ್ಚಗಳಿಗಾಗಿ 75 ಸಾವಿರ ರೂಪಾಯಿ ಭತ್ಯ ನೀಡಲಾಗುವುದು. ಮತ್ತು ಶಾಸಕರ ಕಚೇರಿಯಲ್ಲಿ ಸಹಾಯಕರನ್ನು ನೇಮಿಸಿಕೊಳ್ಳಲು ಸರ್ಕಾರವು ಹೆಚ್ಚುವರಿಯಾಗಿ ತಿಂಗಳಿಗೆ 25,000 ರೂ.ಗಳನ್ನು ಒದಗಿಸುತ್ತದೆ ಎನ್ನಲಾಗಿದೆ.
ಅಗತ್ಯವಿರುವ ಲಾಜಿಸ್ಟಿಕ್ಸ್ ಬೆಂಬಲವಿಲ್ಲದೆ ಶಾಸಕರು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವಿಸಿಕೆ ಶಾಸಕ ಜ್ಯೋತಿಮಣಿ ಹೇಳಿ ಕಾರುಗಳನ್ನು ಒದಗಿಸುವಂತೆ ಕೇಳಿಕೊಂಡ ಬಳಿಕ ಸರ್ಕಾರ ನಿರ್ಧಾರ ಘೋಷಣೆ ಮಾಡಿದೆ. ಇದಲ್ಲದೆ ಚುನಾಯಿತ ಪ್ರತಿನಿಧಿಗಳ ಆರೋಗ್ಯ ವಿಮೆಯನ್ನು 5 ಲಕ್ಷ ರೂ.ನಿಂದ 25 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಘೋಷಿಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net