ಮೊಹರಂ ಅವಾಂತರ: ಹಬ್ಬದ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು? 14,900 ಇಲಿ ಪಾಷಾಣದ ಮಾತ್ರೆಗಳೊಂದಿಗೆ ಫಯಾಜ್ ಅರೆಸ್ಟ್! Rat Poison Pills in Moharram Procession

ಮೊಹರಂ ಮೆರವಣಿಗೆಯಲ್ಲಿ ಜನರಿಗೆ ಇಲಿ ಪಾಷಾಣ ತುಂಬಿದ ಮಾತ್ರೆ ಹಂಚಿಕೆ
ಮೊಹರಂ ಮೆರವಣಿಗೆಯಲ್ಲಿ ಜನರಿಗೆ ಇಲಿ ಪಾಷಾಣ ತುಂಬಿದ ಮಾತ್ರೆ ಹಂಚಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಮೊಹರಂ ಮೆರವಣಿಗೆಯಲ್ಲಿ ಜನರಿಗೆ ಇಲಿ ಪಾಷಾಣ ತುಂಬಿದ ಮಾತ್ರೆ ಹಂಚಿಕೆ
  • ಆರೋಪಿ ಫಯಾಜ್ ಅರೆಸ್ಟ್​​
  • ಬಂಧಿತನಿಂದ ಸುಮಾರು 14,900 ಮಾತ್ರೆಗಳ ಜಫ್ತಿ
ಮುಂಬೈ: ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಜನರಿಗೆ ಇಲಿ ಪಾಷಾಣ ತುಂಬಿರುವ ಮಾತ್ರೆಗಳನ್ನು (Rat Poison Pills in Moharram Procession) ಹಂಚುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಯುವಕನಿಂದ ಸುಮಾರು 14,900 ಇಲಿ ಪಾಷಾಣ ತುಂಬಿರುವ ಗುಳಿಗೆಗಳನ್ನು ಜಫ್ತಿ ಮಾಡಲಾಗಿದ್ದು, ಇದನ್ನು ಮೊಹರಂ ಮೆರವಣಿಗೆ ಸಮಯದಲ್ಲಿ ಹಂಚುತ್ತಿದ್ದ ಎಂದು ಹೇಳಲಾಗುತ್ತಿದ್ದು, ಪೊಲೀಸರು ಇದರಲ್ಲಿ ದೊಡ್ಡ ಪಿತೂರಿಯಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಮುಂದುವರೆದ ತನಿಖೆ!

ಬಂಧಿತ ಯುವಕನನ್ನು ಫಯಾಜ್​ ಎಂದು ಗುರುತಿಸಲಾಗಿದ್ದು, ಇತ ಪುಣೆಯಲ್ಲಿ ಪೇಂಟ್​​ ಅಂಗಡಿಯನ್ನು ಹೊಂದಿದ್ದ ಎಂದು ತಿಳಿದು ಬಂದಿದೆ.
ಮೊಹರಂ ಮೆರವಣಿಗೆ ಸಂದರ್ಭದಲ್ಲಿ, ಇವನು ಈ ಗುಳಿಗೆಗಳನ್ನು ಹಂಚುತ್ತಿದ್ದ. ಈ ಗುಳಿಗೆ ಸೇವಿಸಿದ ವ್ಯಕ್ತಿಯೊಬ್ಬ ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ. ನಂತರ ಪೊಲೀಸರಿಗೆ ದೂರನ್ನು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಬಂಧಿಸುವ ಸಂದರ್ಭದಲ್ಲಿ ಇತನಿಂದ ಸುಮಾರು 14,900 ಇಲಿ ಪಾಷಾಣ ಮಿಶ್ರಿತ ಮಾತ್ರೆಗಳನ್ನು ಜಫ್ತಿ ಮಾಡಲಾಗಿದೆ ಎಂದು ಡಿಸಿಪಿ ಜಯಂತ್​ ಮೀನಾ ತಿಳಿಸಿದ್ದಾರೆ. 2025 ರಲ್ಲಿ ಆರೋಪಿ ಇರಾನ್​ ಮತ್ತು ಇರಾಕ್​ ದೇಶಗಳಿಗೆ ಹೋಗಿಬಂದಿದ್ದಾನೆ. ಇತ್ತೀಚೆಗೆ ಸುಮಾರು 50 ಕೆ.ಜಿ ಜಿಂಕ್ ಫೋಸ್ಫಡ್​ಗೆ ಆರ್ಡರ್​ ನೀಡಿದ್ದನಾಗಿ ತಿಳಿದುಬಂದಿದೆ.
ಸದ್ಯ ಇವನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದರಲ್ಲಿ ಏನೋ ದೊಡ್ಡ ಮಟ್ಟದ ಪಿತೂರಿ ಅಥವಾ ದೇಶದಲ್ಲಿ ವಿಧ್ವಂಸಕ ಕೃತ್ಯವನ್ನು ನಡೆಸುವ ಯೋಜನೆ ಇರುವುದು ನಮ್ಮ ಅನುಮಾನವಾಗಿದೆ. ವಿಚಾರಣೆ ನಂತರ ನಿಖರ ಮಾಹಿತಿ ದೊರೆಯಲಿದೆ ಎಂದು ಡಿಸಿಪಿ ಮೀನಾ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net