ವಾಘಾ ಗಡಿಯಲ್ಲಿ ಅಪರೂಪದ ಕ್ಷಣ: ಭಾರತೀಯ ಸೈನ್ಯಾಧಿಕಾರಿಗೆ ಪಾಕ್ ಸೈನಿಕನಿಂದ ಸೆಲ್ಯೂಟ್; ವಿಡಿಯೋ ವೈರಲ್! Pakistani soldier Salutes Indian Army Officer
ಭಾರತೀಯ ಸೈನ್ಯಾಧಿಕಾರಿಗೆ ಪಾಕಿಸ್ತಾನಿ ಸೈನಿಕನ ಸೆಲ್ಯೂಟ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಾಘಾ ಗಡಿಯಲ್ಲಿ ನಡೆದ ಅಪರೂಪದ ಕ್ಷಣ
ಭಾರತೀಯ ಸೈನ್ಯಾಧಿಕಾರಿಗೆ ಪಾಕಿಸ್ತಾನಿ ಸೈನಿಕನ ಸೆಲ್ಯೂಟ್
ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಪಂಜಾಬ್: ಭಾರತ ಮತ್ತು ಪಾಕಿಸ್ತಾನದ ನಡುವೆ ಏನೇ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಪಂಜಾಬ್ನ ಅಠ್ಠಾರಿ ಗಡಿಯಲ್ಲಿ ಪ್ರತಿದಿನ ಮಿಲಿಟರಿ ಕವಾಯತು ನಡೆಯುತ್ತಲೇ ಇರುತ್ತದೆ. ಇಲ್ಲಿ ಉಭಯ ದೇಶಗಳು ತಮ್ಮ ಅತ್ಯುನ್ನತ ಪರೇಡ್ ಕೌಶಲ್ಯವನ್ನು ನೆರೆದಿರುವ ಪ್ರೇಕ್ಷಕರಿಗೆ ತೋರ್ಪಡಿಸುತ್ತಾರೆ.
ಇತ್ತೀಚೆಗೆ ಈ ಅಠ್ಠಾರಿ ಗಡಿಯಲ್ಲಿ ನಡೆದಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದು, ಪಾಕಿಸ್ತಾನದ ಸೈನಿಕನೊಬ್ಬ ಭಾರತದ ಸೈನ್ಯಾಧಿಕಾರಿಗೆ ಸೆಲ್ಯೂಟ್ (Pakistani soldier Salutes Indian Army Officer) ಮಾಡಿರುವುದು ಈಗ ಎಲ್ಲಡೆ ಚರ್ಚೆಗೆ ಗ್ರಾಸವಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಡೆ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಹೀಗೆ ಬೇರೆ ದೇಶದ ಸೈನಿಕರು ಇನ್ನೊಂದು ದೇಶದ ಸೈನಿಕರಿಗೆ ಅದರಲ್ಲೂ ಶತ್ರು ದೇಶದ ಸೈನಿಕರಿಗೆ ಸೆಲ್ಯೂಟ್ ಮಾಡಬಹುದೇ? ಎಂದು ಪ್ರಶ್ನಿಸುತ್ತಿದ್ದಾರೆ.
ಪಂಜಾಬ್ನ ವಾಘಾ-ಅಠ್ಠಾರಿ ಗಡಿಯಲ್ಲಿ ಈ ಮಿಲಿಟರಿ ಪರೇಡ್ ದಶಕಗಳಿಂದ ನಡೆದುಕೊಂದು ಬರುತ್ತಿದ್ದು, ಇಲ್ಲಿ ಭಾರತ ಹಾಗೂ ಪಾಕಿಸ್ತಾನದ ಸೈನಿಕರು ತಾವು ಒಬ್ಬರಿಗಿಂತ ಮಿಲಿಟರಿ ಕವಾಯತ್ತಿನಲ್ಲಿ ಉತ್ತಮವಾಗಿದ್ದೇವೆ ಎನ್ನುವುದನ್ನು ಸಾಭೀತು ಪಡಿಸಲು ಇಲ್ಲಿ ಪಾಲ್ಗೊಳ್ಳುತ್ತಾರೆ.
ಆದರೆ ಇದೇ ಮೊದಲ ಬಾರಿಗೆ ಈ ರೀತಿ ಘಟನೆ ನಡೆದಿದ್ದು, ಈ ಮೊದಲು ನಡೆದಿದ್ದರೂ ಈ ಸೋಷಿಯಲ್ ಮೀಡಿಯಾ ಆ ಸಮಯದಲ್ಲಿ ಅಲಭ್ಯವಿದ್ದ ಕಾರಣ ಮಾಹಿತಿ ಜನರನ್ನು ತಲುಪಿದ್ದು ಕಡಿಮೆ ಎನ್ನುವುದು ಮಾಜಿ ಸೈನಿಕರ ವಾದವಾಗಿದೆ.
ಹಾಗೂ ಈ ಘಟನೆಯನ್ನು ಕೇವಲ ಗೌರವದ ಸಂಕೇತವಾಗಿ, ಅಂದರೆ ಪಾಕಿಸ್ತಾನದ ಕೆಳಸ್ತರದ ಸೈನಿಕನೊಬ್ಬ ಭಾರತದ ಸೈನ್ಯಾಧಿಕಾರಿಗೆ ನೀಡಿದ ಮಿಲಿಟರಿ ಗೌರವ ಎಂಬ ರೀತಿಯಲ್ಲಿಯೇ ಇದನ್ನು ನೋಡಬೇಕು, ಅದನ್ನು ಬಿಟ್ಟು ಭಾರತ ಮತ್ತು ಪಾಕಿಸ್ತಾನದ ನಡುವೆ ಎಲ್ಲವೂ ಸರಿಯಿದೆ ಎಂಬ ಭ್ರಮೆ ಜನರಿಗೆ ಬೇಡ ಎಂದು ತಿಳಿಸಿದ್ದಾರೆ, (ಏಜನ್ಸೀಸ್).