3 ವರ್ಷದ ಬಾಲಕಿ ಮೇಲೆ ಅತ್ಯಾಚಾರ-ಕೊಲೆ; 65 ವರ್ಷದ ವೃದ್ಧನಿಗೆ ಗಲ್ಲು ಶಿಕ್ಷೆ ವಿಧಿಸಿದ ಪುಣೆ ಕೋರ್ಟ್​..Pune

Pune court sentences 65-year-old to death for rape murder of 3-year-old girl
Pune court sentences 65-year-old to death for rape murder of 3-year-old girl
Published on
ಪುಣೆ: 65 ವರ್ಷದ ವ್ಯಕ್ತಿಯೊಬ್ಬ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ನಡೆಸಿತ್ತು. ಸದ್ಯ ಅಪರಾಧಿಗೆ ಪುಣೆಯ ವಿಶೇಷ ನ್ಯಾಯಾಲಯವು (Pune court )ಮರಣದಂಡನೆ ವಿಧಿಸಿದೆ. ಘಟನೆ ನಡೆದು ದೂರು ದಾಖಲಾದ 60 ದಿನಗಳಲ್ಲಿ ಈ ಮಹತ್ತರ ತೀರ್ಪುನ್ನು ಹೊರಡಿಸಿದೆ.
ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಪ್ರಾಸಿಕ್ಯೂಷನ್ ಮಂಡಿಸಿದ "ಕೊನೆಯದಾಗಿ ಒಟ್ಟಿಗೆ ಕಂಡಿದ್ದ"ಸಿದ್ಧಾಂತದ ಆಧಾರದ ಮೇಲೆ ಆರೋಪಿ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಭೀಕರ ಘಟನೆ ನಡೆದ ಕೇವಲ 60 ದಿನಗಳ ಒಳಗಾಗಿಯೇ ನ್ಯಾಯಾಲಯವು ಈ ತೀರ್ಪನ್ನು ಪ್ರಕಟಿಸಿದೆ.
ವಿಶೇಷ ನ್ಯಾಯಾಧೀಶರಾದ ಎಸ್.ಆರ್. ಸಾಳುಂಕೆ ಅವರು ಈ ಪ್ರಕರಣವನ್ನು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಪರಿಗಣಿಸಿ, ಅಪರಾಧಿಗೆ ಯಾವುದೇ ಕರುಣೆ ತೋರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೇವಲ 55 ದಿನಗಳ ದಾಖಲೆಯ ಅವಧಿಯಲ್ಲಿ ಈ ಇಡೀ ಪ್ರಕರಣದ ವಿಚಾರಣೆ ಪೂರ್ಣಗೊಂಡು ತೀರ್ಪು ಹೊರಬಿದ್ದಿರುವುದು ವಿಶೇಷವಾಗಿದೆ.

ಕೋರ್ಟ್​ ಗಮನಿಸಿದ್ದು ಏನು?

ಪ್ರಕರಣ ಬೆಳಕಿಗೆ ಬಂದ ನಂತರ ಅಪರಾಧಿಗೆ ಪ್ರಕರಣದ ಬಗ್ಗೆ ಯಾವುದೇ ಪಶ್ಚಾತಾಪವಿರಲಿಲ್ಲ. ಇದನ್ನು ಕೋರ್ಟ್​ ಗಮನಿಸಿದೆ. ಆತನ ನಡವಳಿಕೆಯಲ್ಲಿ ಯಾವುದೇ ಸುದಾರಣೆಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಈ ಹಿಂದೆಯೂ ಇದೇ ವೃದ್ಧ 17 ವರ್ಷದ ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.

ದನದ ಕೊಟ್ಟಿಗೆಯಲ್ಲಿ ಅತ್ಯಾಚಾರ ಕೊಲೆ

2026 ಮೇ 1ರಂದು ಪುಣೆ ಜಿಲ್ಲೆಯ ನಸ್ರಾಪುರ ಗ್ರಾಮದಲ್ಲಿ 3 ವರ್ಷದ ಬಾಲಕಿಯ ಮೇಲೆ 65 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದ. ಮನೆಗೆ ಹೋಗುತ್ತಿದ್ದ ಮಗುವನ್ನು ಹತ್ತಿರದ ದನದ ಕೊಟ್ಟಿಗೆಗೆ ಕರೆದೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ಬಾಲಕಿ ಕಾಣೆಯಾದ ನಂತರ ಆಕೆಯ ಕುಟುಂಬ ಸದಸ್ಯರು ಆಕೆಗಾಗಿ ಹುಡುಕಾಟ ಆರಂಭಿಸಿದರು, ಮತ್ತು ನಂತರ ಆಕೆಯ ಶವ ದನದ ಕೊಟ್ಟಿಗೆಯೊಳಗೆ ಪತ್ತೆಯಾಗಿತ್ತು.


ಕಾರಣವಾಯಿತು, ನಸ್ರಾಪುರದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿ ರಸ್ತೆಗಳನ್ನು ತಡೆದರು. ಪುಣೆಯ ಇತರ ಪ್ರದೇಶಗಳಲ್ಲಿಯೂ ಸಹ ಪ್ರತಿಭಟನೆಗಳು ನಡೆದವು, ಸ್ಥಳೀಯರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದರು, (ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net