ಜಗಳದ ಮಧ್ಯೆ ಪತಿ ಅಭಿಲಾಷ್, ಹುಟ್ಟಲಿರುವ ಮಗುವಿಗೆ ಡಿಎನ್‌ಎ ಪರೀಕ್ಷೆ ಮಾಡಿಸಬೇಕು ಎಂದು ಹಠ ಹಿಡಿದು ಗದ್ದಲ ಸೃಷ್ಟಿಸಿದ್ದಾನೆ. ಆ ಸಮಯದಲ್ಲಿ ಸಮುದಾಯದ ಹಿರಿಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ತಿಳಿಗೊಳಿಸಿದ್ದರು. ಆದರೆ, ಹಿರಿಯರು ಹೋದ ಮೇಲೂ ಪತಿ ಮತ್ತು ಅತ್ತೆಯ ಕಿರುಕುಳ ಮುಂದುವರಿದಿದೆ ಎನ್ನಲಾಗಿದೆ. ಈ ಘಟನೆ ನಡೆದ ಎರಡು ದಿನಗಳ ಬಳಿಕ, ಸುಶ್ಮಿತಾ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.