ಜೆಎನ್‌ಯುನಲ್ಲಿ ಪ್ರತಿಭಟನೆ ಕಿಚ್ಚು: ಪೊಲೀಸರಿಗೆ ಕಚ್ಚಿ, ಬೂಟು ಎಸೆದು ವಿದ್ಯಾರ್ಥಿಗಳ ರಂಪಾಟ; ಪ್ರತಿಭಟನಾಕಾರರ ಮೇಲೆ ಖಾಕಿ ಪಡೆ ಲಾಠಿಚಾರ್ಜ್| JNU

ದೆಹಲಿಯಲ್ಲಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ
ದೆಹಲಿಯಲ್ಲಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ
Published on

ಪ್ರಮುಖ ಮುಖ್ಯಾಂಶಗಳು

  • ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಭೀಕರ ಘರ್ಷಣೆ
  • ಪೊಲೀಸರ ಮೇಲೆ ಬೂಟು, ಕೋಲುಗಳನ್ನು ಎಸೆದ ವಿದ್ಯಾರ್ಥಿಗಳು
  • ಪೊಲೀಸರ ಮೇಲೆ ಲಾಠಿ ಚಾರ್ಜ್​ ಮಾಡಿದ ದೆಹಲಿ ಪೊಲೀಸರು
ನವದೆಹಲಿ: ನವದೆಹಲಿಯಲ್ಲಿ ಗುರುವಾರ(ಫೆ.26) ವಿದ್ಯಾರ್ಥಿ ಸಂಘ ನಡೆಸಿದ ಮೆರವಣಿಗೆಯಲ್ಲಿ ಪೊಲೀಸರು ಮತ್ತು ಜವಹರಲಾಲ್​ ನೆಹರು ವಿಶ್ವವಿದ್ಯಾಲಯ (JNU) ದ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದ ಪರಿಣಾಮ ಪೊಲೀಸರು ಪ್ರತಿಭಟನಾಕಾರರ ಮೇಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಪ್ರತಿಭಟನಾಕಾರರು ಕೋಲು ಮತ್ತು ಬೂಟುಗಳನ್ನು ಪೊಲೀಸರ ಮೇಲೆ ಎಸೆದು ದೈಹಿಕ ಹಲ್ಲೆ ನಡೆಸಿದ ಪರಿಣಾಮ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ, ಅಷ್ಟೇ ಅಲ್ಲದೆ ಘರ್ಷಣೆಯ ವೇಳೆ ಕೆಲ ವಿದ್ಯಾರ್ಥಿಗಳು ತಮ್ಮನ್ನು ಕಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜವಹರಲಾಲ್​ ನೆಹರು ವಿಶ್ವವಿದ್ಯಾಲಯದ ಕುಲಪತಿ ಶಾಂತಿಶ್ರೀ ಧುಲಿಪುಡಿ ಪಂಡಿತ್ ಅವರು ಇತ್ತೀಚೆಗೆ ಪಾಡ್​ಕಾಸ್ಟ್​ವೊಂದರಲ್ಲಿ ವಿಶ್ವವಿದ್ಯಾಲಯದಲ್ಲಿ ಯುಜಿಸಿಯ ನೂತನ ನಿಯಮಗಳ ಅಗತ್ಯವಿಲ್ಲ ಎಂಬ ಹೇಳಿಕೆ, ಜೆಎನ್‌ಯುಎಸ್‌ಯು (JNUSU) ಪದಾಧಿಕಾರಿಗಳನ್ನು ವಜಾಮಾಡಿದ್ದು ಹಾಗೂ ರೋಹಿತ್ ಕಾಯ್ದೆಯ ಕುರಿತು ನೀಡಿದ ಹೇಳಿಕೆಗಳನ್ನು ವಿರೋಧಿಸಿ ಈ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ಕ್ಯಾಂಪಸ್‌ನಿಂದ ಶಿಕ್ಷಣ ಸಚಿವಾಲಯದ ಕಚೇರಿಗೆ ಲಾಂಗ್ ಮಾರ್ಚ್​ಗೆ ಕರೆ ನೀಡಿದ್ದರು. ಆದರೆ ಯಾವಾಗ ರ‍್ಯಾಲಿಯನ್ನು ಕ್ಯಾಂಪಸ್‌ನಿಂದ ಹೊರಗೆ ಕರೆದೊಯ್ಯಲು ಪ್ರಯತ್ನಿಸಿದಾಗ ಕಾಲೇಜು ಗೇಟ್‌ನಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ (JNUSU) ಅಧ್ಯಕ್ಷೆ ಅದಿತಿ ಮಿಶ್ರಾ, ಮಾಜಿ ಅಧ್ಯಕ್ಷ ನಿತೀಶ್ ಕುಮಾರ್ ಮತ್ತು ಇತರ ಹಲವರನ್ನು ಬಂಧಿಸಲಾಗಿದೆ ಪೋಲಿಸರು ತಿಳಿಸಿದ್ದಾರೆ.
ರ‍್ಯಾಲಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲ ಪ್ರಯೋಗ ಮಾಡಿದ್ದಾರೆ, ಅಷ್ಟೇ ಅಲ್ಲದೆ ಪ್ರತಿಭಟನೆಯಲ್ಲಿ ಬಳಸಲಾಗಿದ್ದ ಡಾ. ಬಿ. ಆರ್​. ಅಂಬೇಡ್ಕರ್​ ಅವರ ಭಾವಚಿತ್ರವನ್ನು ಪೊಲೀಸರು ನಾಶ ಪಡಿಸಿದ್ದಾಗಿ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಇನ್ನು ರ‍್ಯಾಲಿಯ ವೇಳೆ ಬಂಧಿಸಲಾಗಿರುವ ವಿದ್ಯಾರ್ಥಿಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದ್ದು ಅವರ ಪ್ರಾಣಕ್ಕೆ ಅಪಾಯವಿದೆ ಎನ್ನುವುದು ವಿದ್ಯಾರ್ಥಿಗಳ ಆರೋಪವಾಗಿದೆ.
ವಿದ್ಯಾರ್ಥಿಗಳಿಗೆ ಕ್ಯಾಂಪಸ್​ನಿನ ಒಳಗೆ ಪ್ರತಿಭಟನೆ ನಡೆಸಲು ಅವಕಾಶವನ್ನು ನೀಡಲಾಗಿದ್ದು, ಕ್ಯಾಂಪಸ್​ನಿಂದ ಹೊರೆಗೆ ಹೋಗಿ ಘೋಷಣೆ ಕೂಗಲು ಯಾವುದೇ ಅನುಮತಿ ಇರಲಿಲ್ಲ. ನಿಯಮವನ್ನು ಮೀರದಿರಿ ಎಂದು ತಿಳಿ ಹೇಳಲು ಹೋದ ಪೊಲೀಸರ ಮೇಲೆ ಯಾವಾಗ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾದರೋ ಆಗ ನಾವು ಅಗತ್ಯ ಕ್ರಮವನ್ನು ಕೈಗೊಳ್ಳ ಬೇಕಾಯಿತು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಭದ್ರತೆಗೆ ನಿಲ್ಲಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ವಿದ್ಯಾರ್ಥಿಗಳು ಧ್ವಂಸ ಮಾಡಿದ್ದಾರೆ. ಪ್ರತಿಭಟನಾಕಾರರು ಪೊಲೀಸರತ್ತ ಕೋಲು ಮತ್ತು ಬೂಟುಗಳನ್ನು ಎಸೆದು ದೈಹಿಕ ಹಲ್ಲೆ ನಡೆಸಿದ್ದಾರೆ. ಗಲಾಟೆಯ ಸಮಯದಲ್ಲಿ ಒಂದಿಷ್ಟು ವಿದ್ಯಾರ್ಥಿಗಳು ಪೊಲೀಸ್ ಸಿಬ್ಬಂದಿಗಳನ್ನು ಕಚ್ಚಿದ್ದಾರೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net