ಮೊದಲ ರಾತ್ರಿ ನಿರಾಕರಿಸಿದ ಸೊಸೆಗೆ ಅತ್ತೆಯಿಂದ ಧರ್ಮದೇಟು: ವೈರಲ್ ವಿಡಿಯೋ ಹಿಂದಿನ ಅಸಲಿ ಕಥೆಯೇನು? Viral Video

ಸೊಸೆಗೆ ಮನಸೋ ಇಚ್ಛೆ ಹೊಡೆಯುತ್ತಿರುವ ಅತ್ತೆ
ಸೊಸೆಗೆ ಮನಸೋ ಇಚ್ಛೆ ಹೊಡೆಯುತ್ತಿರುವ ಅತ್ತೆ
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ರಾತ್ರಿ ಬೇಡ ಎಂದಿದ್ದಕ್ಕೆ ಸೊಸೆಗೆ ಅತ್ತೆಯ ಧರ್ಮದೇಟು
  • ನಾನು ನನ್ನ ಪ್ರೀಯಕರನೊಂದಿಗೆ ಓಡಿ ಹೋಗುತ್ತೇನೆ ಎಂದ ಸೊಸೆ
  • ವೈರಲ್​ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
ಉತ್ತರಪ್ರದೇಶ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಸಕಾರಾತ್ಮಕ, ಮಾಹಿತಿಯುಳ್ಳ ಅಥವಾ ತೆರೆಮರೆಯಲ್ಲಿರುವ ಪ್ರತಿಭೆಗಳಿಗೆ ವೇದಿಕೆಯಾಗುವ ಬದಲಿಗೆ, ಕೇವಲ ವೀಕ್ಷಣೆಯನ್ನು ಪಡೆಯಲು ಚಿತ್ರವಿಚಿತ್ರ ರೀತಿಯ ವಿಡಿಯೋಗಳು ವೈರಲ್​ (Viral Video) ಆಗುತ್ತಿದೆ.
ಕೆಲದಿನಗಳ ಹಿಂದೆ ತನ್ನ ಹೆಂಡತಿಯನ್ನೇ ಬಾಡಿಗೆಗೆ ನೀಡುವ ಮತ್ತು ತಾನು ಪ್ರೀತಿಸಿದ ಹುಡುಗಿ ಬೇರೋಬ್ಬನನ್ನು ಮದುವೆಯಾದಳೆಂದು ಆಕೆಗೆ ಬಂದೂಕಿನಿಂದ ಗುಂಡು ಹಾರಿಸಿದ ಘಟನೆಗಳು ಫುಲ್​ ವೈರಲ್​ ಆಗಿದ್ದವು. ಈಗ ಇದೇ ರೀತಿಯ ಇನ್ನೊಂದು ವಿಚಿತ್ರ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದ್ದು ವೈರಲ್​ ವಿಡಿಯೋನಲ್ಲಿ ಒಬ್ಬ ಮಹಿಳೆ,ನವ ವಿವಾಹಿತ ಮಹಿಳೆಗೆ ಹೊಡೆಯುತ್ತಿರುವುದನ್ನು ನಾವು ನೋಡಬಹುದಾಗಿದೆ.

ಮೊದಲ ರಾತ್ರಿ ಬೇಡ ಅಂದಿದ್ದಕ್ಕೆ ಬೆಂಡೆತ್ತಿದ ಅತ್ತೆ!

ವೈರಲ್​ ಆದ ವಿಡಿಯೋ ಉತ್ತರಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದ ಘಟನೆಯದ್ದಾಗಿದೆ ಎಂದು ವರದಿಯಾಗಿದೆ. ವಿಡಿಯೋನಲ್ಲಿ ನವವಧುವಿನ ಸುತ್ತ ಸುಮಾರು ಜನ ಕುಳಿತಿದ್ದು, ಆ ಹುಡುಗಿಯು ನಾನು ನಿನ್ನ ಮಗನೊಂದಿಗೆ ಮೊದಲ ರಾತ್ರಿ ಆಚರಿಸಿ ಕೊಳ್ಳುವುದಿಲ್ಲ.
ಇನ್ನೇನು ಸ್ವಲ್ಪ ಹೊತ್ತಿನಲ್ಲಿ ನನ್ನ ಪ್ರೀಯಕರ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೇಳುವುದನ್ನು ಕೇಳಬಹುದಾಗಿದೆ. ಈ ಮಾತನ್ನು ಕೇಳಿಸಿಕೊಂಡ ಅತ್ತೆಯು, ಸೊಸೆಯ ಮೇಲೆ ಏಕಾಏಕಿ ಎರಗಿ ಮನಸೋ ಇಚ್ಛೇ ಥಳಿಸಿರುವುದು ವಿಡಿಯೋನಲ್ಲಿ ಚಿತ್ರೀಕರಣವಾಗಿದೆ. ಆದರೆ ಈ ಕುರಿತು ಇಲ್ಲಿವರೆಗೆ ಪೊಲೀಸ್​ ಠಾಣೆಯಲ್ಲಿ ದೂರ ದಾಖಲಾಗಿರದ ಕಾರಣ ಅಂತೆ-ಕಂತೆಗಳನ್ನು ಸೇರಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರ ಕಿವಿಗಳು ನೆಟ್ಟಗಾಗಿವೆ. ಆ ಹುಡುಗಿಗೆ ಮದವೆ ಇಷ್ಟವಿಲ್ಲದಿದ್ದರೆ ಮೊದಲೇ ತಿಳಿಸಿಬೇಕಿತ್ತು, ಈಗ ಈ ಡ್ರಾಮಾ ಮಾಡುವ ಅಗತ್ಯ ಬೀಳುತ್ತಿರಲಿಲ್ಲ ಎಂದು ಒಬ್ಬರು ಹೇಳಿದೆ, ಆ ಹುಡುಗಿ ಏನೇ ತಪ್ಪನ್ನು ಮಾಡಿರಲಿ ಆಕೆಯ ಮೇಲೆ ಕೈ ಎತ್ತಿದ್ದು ತಪ್ಪು ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಕಾಲದ ಹುಡುಗಿಯರು ಮೊದಲು ಮದುವೆಯಾಗುತ್ತಾರೆ, ನಂತರ ತಮ್ಮ ಪ್ರೀಯಕರನೊಂದಿಗೆ ಓಡಿ ಹೋಗುತ್ತಾರೆ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಕಮೆಂಟ್​ ಮೂಲಕ ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net