ಹೈಕೋರ್ಟ್‌ನಿಂದ 'ದಿ ಕೇರಳ ಸ್ಟೋರಿ 2' ಸಿನಿಮಾಗೆ ತಡೆಯಾಜ್ಞೆ: ಸುಪ್ರೀಂ ಕೋರ್ಟ್​ ಮೆಟ್ಟಿಲೇರಲು ಸಜ್ಜಾದ ನಿರ್ಮಾಪಕ | The Kerala Story 2

ದಿ ಕೇರಳ ಸ್ಟೋರಿ 2, ಸುಪ್ರೀಂ ಕೋರ್ಟ್​
ದಿ ಕೇರಳ ಸ್ಟೋರಿ 2, ಸುಪ್ರೀಂ ಕೋರ್ಟ್​
Published on

ಪ್ರಮುಖ ಮುಖ್ಯಾಂಶಗಳು

  • ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್​ ತಡೆ
  • ಕೋಮು ಭಾವನೆಯನ್ನು ಕೆರಳಿಸುವ ಸಂಗತಿಯಿದೆ ಎಂದ ನ್ಯಾಯಪೀಠ
  • ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಸು ನಿರ್ಮಾಪಕ ತಯಾರಿ
ಕೇರಳ: ದಿ ಕೇರಳ ಸ್ಟೋರಿ 2 (The Kerala Story 2) ಸಿನಿಮಾ ಬಿಡುಗಡೆಯಾಗಲು ಒಂದು ದಿನ ಬಾಕಿ ಇರುವಾಗ, ಬಿಡುಗಡೆಗೆ ಕಾನೂನು ಅಡಚಣೆ ಎದುರಾಗಿದ್ದು, ಚಿತ್ರದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿ, ಕೇರಳ ಹೈಕೋರ್ಟ್ ಚಿತ್ರದ ಬಿಡುಗಡೆಗೆ ಎರಡು ವಾರಗಳ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈಗ ಈ ಆದೇಶದಿಂದ ಸಂತೃಪ್ತರಾಗದ ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಸುಪ್ರೀಂ ಕೋರ್ಟ್‌ನಲ್ಲಿ ಈ ಆದೇಶವನ್ನು ಪ್ರಶ್ನಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟೀಸರ್ ಮತ್ತು ಟ್ರೇಲರ್ ಬಗ್ಗೆ ಹೈಕೋರ್ಟ್ ಕಳವಳ

ಮಧ್ಯಂತರ ಆದೇಶ ಹೊರಡಿಸುವಾಗ, ಕೇರಳ ಹೈಕೋರ್ಟ್ ಸಿನಿಮಾದ ಟೀಸರ್ ಮತ್ತು ಟ್ರೇಲರ್ ಕೋಮು ಸೌಹಾರ್ದತೆಯನ್ನು ಕೆಡಿಸುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದೆ. ಚಲನಚಿತ್ರಕ್ಕೆ ಅನುಮತಿ ನೀಡುವಾಗ ಈ ಅಂಶದ ಕುರಿತು ಗಮನ ಹರಿಸದ ಕಾರಣಕ್ಕೆ ನ್ಯಾಯಾಲಯವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿತ್ತು.
ಈ ಪ್ರಕರಣದ ವಾದ ಮಂಡಣೆ ಮುಗಿಯುವವರೆಗೆ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ನ್ಯಾಯಪೀಠ ನಿರ್ದೇಶಿಸಿದೆ. ಈ ಆದೇಶವು ಎರಡು ವಾರಗಳ ಕಾಲ ಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸುತ್ತದೆ ಮಾಡಿದೆ.
ಈ ವಾರದ ಆರಂಭದಲ್ಲಿ, ಚಿತ್ರದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ನಿರ್ಮಾಪಕರಿಗೆ ನ್ಯಾಯಪೀಠದ ಮುಂದೆ ಸಿನಿಮಾವನ್ನು ಪ್ರದರ್ಶಿಸುವಂತೆ ಕೇಳಿತ್ತು. ಆದರೆ ನಿರ್ಮಾಪಕರು ಹಾಗೆ ಮಾಡಲು ನಿರಾಕರಿಸಿದರು ಮತ್ತು ಬದಲಿಗೆ ವಾದ ಮಂಡನೆ ಮುಂದುವರೆಸುವುದಾಗಿ ಹೇಳಿದರು.

ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಾಧ್ಯತೆ

ಹೈಕೋರ್ಟ್ ತಡೆಯಾಜ್ಞೆಯ ನಂತರ, ವಿಪುಲ್ ಅಮೃತ್‌ಲಾಲ್ ಶಾ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದಾರೆ ಎಂದು ಮೂಲಗಳು ಸೂಚಿಸುತ್ತವೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳಬಹುದು ಅಥವಾ ನಿರ್ಮಾಪಕರು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವನ್ನು ಸಂಪರ್ಕಿಸಲು ನಿರ್ದೇಶಿಸಬಹುದು.
ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನದ ಮತ್ತು ಸನ್‌ಶೈನ್ ಪಿಕ್ಚರ್ಸ್ ಬೆಂಬಲದೊಂದಿಗೆ, ದಿ ಕೇರಳ ಸ್ಟೋರಿ 2 ಚಿತ್ರವು ಕಳೆದ ವರ್ಷ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದ ದಿ ಕೇರಳ ಸ್ಟೋರಿಯ ಮುಂದುವರಿದ ಭಾಗವಾಗಿದೆ, ಸುದೀಪ್ತೋ ಸೇನ್‌ಗೆ ಅತ್ಯುತ್ತಮ ನಿರ್ದೇಶಕ ಮತ್ತು ಪ್ರಶಾಂತನು ಮಹಾಪಾತ್ರ ಅವರಿಗೆ ಅತ್ಯುತ್ತಮ ಛಾಯಾಗ್ರಹಕ ಪ್ರಶಸ್ತಿ ಲಭಿಸಿತ್ತು.
ಈ ಸಿನಿಮಾವು ಸತ್ಯ ಘಟನೆಗಳನ್ನು ಆಧರಿಸಿದೆ ಎಂದು ನಿರ್ಮಾಪಕರು ಸಮರ್ಥಿಸಿಕೊಂಡಿದ್ದಾರೆ ಮತ್ತು ಕೇರಳವನ್ನು ನಕಾರಾತ್ಮಕವಾಗಿ ಗುರಿಯಾಗಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net