ಬಿಹಾರ ವಿಧಾನಸಭೆಯಲ್ಲಿ ಬಂಕಿಪುರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಶಾಂತ್ ಕಿಶೋರ್ | Prashant Kishor

ಪ್ರಶಾಂತ್ ಕಿಶೋರ್ ಪ್ರಮಾಣವಚನ ಸ್ವೀಕರಿಸುತ್ತಿರುವುದು.
ಪ್ರಶಾಂತ್ ಕಿಶೋರ್ ಪ್ರಮಾಣವಚನ ಸ್ವೀಕರಿಸುತ್ತಿರುವುದು.
Published on
ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿ ಸೋಮವಾರ(ಆ. 17) ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್(Prashant Kishor) ಅವರು ಬಂಕಿಪುರ ಶಾಸಕರಾಗಿ ಸ್ಪೀಕರ್ ಪ್ರೇಮ್ ಕುಮಾರ್ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 
ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಶಾಂತ್ ಕಿಶೋರ್, ಸಮಾಜ ಮತ್ತು ರಾಜ್ಯದ ಉನ್ನತಿಗಾಗಿ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಮುಡಿಪಾಗಿಟ್ಟ ನೂರಾರು ಶಾಸಕರ ಹಾದಿಯಲ್ಲಿ ಕಾರ್ಯನಿರ್ವಹಿಸುವುದು ತಮಗೆ ದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಮುಂದುವರೆದು, ಕೃಷ್ಣ ಸಿನ್ಹಾ, ಕರ್ಪೂರಿ ಠಾಕೂರ್, ಅನುಗ್ರಹ ನಾರಾಯಣ ಸಿನ್ಹಾ, ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್, ಕೇದಾರ್ ಪಾಂಡೆ, ರಾಮ್ ವಿಲಾಸ್ ಪಾಸ್ವಾನ್ ಮತ್ತು ಸುಶೀಲ್ ಕುಮಾರ್ ಮೋದಿ ಅವರಂತಹ ಜನರು ಸೇವೆ ಸಲ್ಲಿಸಿದ ಸದನದ ಸದಸ್ಯರಾಗಿರುವುದು ನನಗೆ ಹೆಮ್ಮೆಯ ವಿಷಯ ಎಂದಿದ್ದಾರೆ.


ಆಗಸ್ಟ್​ 03ರಂದು ಪ್ರಕಟಗೊಂಡ ಬಿಹಾರದ ಪ್ರತಿಷ್ಠಿತ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್, ಐತಿಹಾಸಿಕವಾಗಿ ಚುನಾವಣಾ ಚೊಚ್ಚಲ ಪ್ರವೇಶದಲ್ಲೇ ಗೆಲ್ಲುವ ಮೂಲಕ, ಕಳೆದ 30 ವರ್ಷಗಳಿಂದ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಬಿಜೆಪಿ ದೊಡ್ಡ ಹೊಡೆತ ನೀಡಿದ್ದರು. 

64,151 ಮತಗಳನ್ನು ಗಳಿಸಿ ಬಿಜೆಪಿಯ ನೀರಜ್ ಕುಮಾರ್ ಅವರನ್ನು 19,324 ಮತಗಳ ಅಂತರದಿಂದ ಸೋಲಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆ ಆ ಸ್ಥಾನಕ್ಕೆ ನಡೆದ ಚುನಾವಣೆ ನಡೆದಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net