ಒಂದು ವೇಳೆ ನ್ಯಾಯಾಲಯವು ದೂರನ್ನು ಪರಿಗಣಿಸಿ ನನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರೆ ಅಥವಾ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದರೆ, ನಾನು ಮಾಹಿತಿ ಮುಚ್ಚಿಟ್ಟಿದ್ದೇನೆ ಎಂದು ಹೇಳುವುದು ಸರಿಯಾಗುತ್ತಿತ್ತು. ಆದರೆ, ಯಾವುದೇ ಪ್ರಕರಣವೇ ಅಸ್ತಿತ್ವದಲ್ಲಿ ಇಲ್ಲದಿರುವಾಗ, ನಾನು ಏನನ್ನು ಮರೆಮಾಚಿದ್ದೇನೆ ಎಂದು ಹೇಳಲು ಸಾಧ್ಯ..? ಎಂದು ಅವರು ಪ್ರಶ್ನಿಸಿದ್ದಾರೆ. ಚುನಾವಣಾ ಅಧಿಕಾರಿಯ (ರಿಟರ್ನಿಂಗ್ ಆಫೀಸರ್) ಅಂತಿಮ ಆದೇಶವು ತಮ್ಮ ಪರ ವಕೀಲರು ಮಂಡಿಸಿದ ವಾದಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ಮೀನಾಕ್ಷಿ ಅವರಯ, ಈ ಇಡೀ ಘಟನೆಯು ರಾಜಕೀಯ ಪ್ರೇರಿತವಾಗಿದ್ದು, ನಾವು ಸೋತಿರುವುದು ಕಾನೂನಿನ ಹೋರಾಟದಲ್ಲಲ್ಲ, ಬದಲಿಗೆ ಆಡಳಿತ ಪಕ್ಷದ ಹಠದ ರಾಜಕೀಯಕ್ಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.