ರೈಲು ನಿಲ್ಲಿಸಿ ಪ್ಲೀಸ್: ವಂದೇ ಭಾರತ್ ಮಿಸ್ ಮಾಡಿಕೊಂಡ ಮಹಿಳೆಯ ಕಣ್ಣೀರು; ಲೋಕೋ ಪೈಲಟ್ ಮುಂದೆ ಕೈಮುಗಿದ ವಿಡಿಯೋ ವೈರಲ್! Viral Video

ರೈಲು ನಿಲ್ಲಿಸುವಂತೆ ಲೋಕೊ ಪೈಲೆಟ್​ಗೆ ಕೈಮುಗಿದ ಮಹಿಳೆ
ರೈಲು ನಿಲ್ಲಿಸುವಂತೆ ಲೋಕೊ ಪೈಲೆಟ್​ಗೆ ಕೈಮುಗಿದ ಮಹಿಳೆ
Published on

ಪ್ರಮುಖ ಮುಖ್ಯಾಂಶಗಳು

  • ವಂದೇ ಭಾರತ್ ರೈಲನ್ನು ತಪ್ಪಿಸಿಕೊಂಡ ಮಹಿಳೆ
  • ರೈಲು ನಿಲ್ಲಿಸುವಂತೆ ಲೋಕೊ ಪೈಲೆಟ್​ಗೆ ಕೈಮುಗಿದ ಮಹಿಳೆ
  • ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
ವೈರಲ್​: ಭಾರತದಲ್ಲಿ ಈ ಅಂತರ್ಜಾಲ ಕ್ರಾಂತಿ ನಡೆದ ದಿನದಿಂದ ದೇಶದ ಯಾವುದೇ ಮೂಲೆಯಲ್ಲಿ ಏನೇ ಘಟನೆ ನಡೆದರೂ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತದೆ. ಇತ್ತೀಚೆಗೆ ವಂದೇ ಭಾರತ್​ ರೈಲನ್ನು ತಪ್ಪಿಸಿಕೊಂಡ ಮಹಿಳೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ (Viral Video) ಆಗುತ್ತಿದೆ.

ವಿಡಿಯೋನಲ್ಲಿ ಏನಿದೆ?

ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ (ಬಹುಶಃ ದಂಪತಿಗಳಿರಬೇಕು) ಕೈಯಲ್ಲಿ ಬ್ಯಾಗ್​ಗಳನ್ನು ಹಿಡಿದು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿರುವುದನ್ನು ನೋಡಬಹುದಾಗಿದೆ. ಯಾವಾಗ ವಂದೇ ಭಾರತ್​ ರೈಲು ಚಲಿಸಲು ಶುರು ಮಾಡುತ್ತದೆಯೋ ಒಬ್ಬ ಮಹಿಳೆ ಕಣ್ಣೀರನ್ನು ಸುರಿಸುತ್ತಾ, ಲೋಕೊ ಪೈಲೆಟ್​​ಗೆ ರೈಲನ್ನು ನಿಲ್ಲಿಸುವಂತೆ ಕೈ ಮುಗಿಯುತ್ತಿರುವುದನ್ನು ನೋಡಬಹುದಾಗಿದೆ.
ವಿಡಿಯೋದ ಕೊನೆಯಲ್ಲಿ ಲೋಕೊ ಪೈಲೆಟ್​ ರೈಲಿನ ವೇಗವನ್ನು ಕಡಿಮೆ ಮಾಡಿದಂತೆ ಕಂಡಿದೆ, ಆದರೆ ಆ ಮಹಿಳೆಯರು ರೈಲನ್ನು ಹತ್ತಿದರೋ ಅಥವಾ ಇಲ್ಲವೋ? ಎಂದು ಇದು ವರೆಗೆ ತಿಳಿದು ಬಂದಿಲ್ಲ.

ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದಂತೆ ನೆಟ್ಟಿಗರ ನೆತ್ತಿ ಬಿಸಿಯಾಗಿದೆ. ಪಾಪ ಆ ಮಹಿಳೆ ಅಷ್ಟು ಗೋಗರೆದರೂ ಲೋಕೊ ಪೈಲೆಟ್​ ರೈಲನ್ನು ನಿಲ್ಲಿಸಿಲ್ಲ ಎಂದರೆ ಇದು ನಾಚಿಕೆಗೇಡಿನ ಸಂಗತಿ ಎಂದು ಒಬ್ಬರು ಬರೆದಿದ್ದಾರೆ. ಪಾಪ ಆ ಮಹಿಳೆಗೆ ಏನು ತುರ್ತು ಕಾರ್ಯವಿತ್ತೋ ಏನೋ ಎರಡು ನಿಮಷ ರೈಲನ್ನು ನಿಲ್ಲಿಸಿದರೇ ಏನು ದೇಶವೇ ಮುಳುಗಿ ಹೋಗುತ್ತಾ? ಎಂದು ಇನ್ನೊಬ್ಬರು ಆಕ್ರೋಶವನ್ನು ಹೊರಹಾಕಿದ್ದಾರೆ.
ಇನ್ನೂ ಕೆಲವರು ಮಹಿಳೆಯರನ್ನು ತರಾಟಗೆ ತೆಗೆದುಕೊಂಡಿದ್ದು, ಸರಿಯಾದ ಸಮಯಕ್ಕೆ ನಿಲ್ದಾಣಕ್ಕೆ ಬಂದಿದ್ದರೆ ಇವೆಲ್ಲಾ ಇರ್ತಾ ಇತ್ತಾ? ಎಂದು ತರಾಟೆ ತೆಗೆದುಕೊಂಡಿದ್ದಾರೆ. ನನಗಂತೂ ಲೋಕೊ ಪೈಲೆಟ್​ ಮಾಡಿದ್ದೂ ತಪ್ಪು ಅನಿಸಿಲ್ಲ, ಅವನು ಆತನ ಜವಾಬ್ದಾರಿಯನ್ನು ನಿರ್ವಹಿಸಿದ್ದಾನೆ ಎಂದು ಹೇಳಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net