ಚಿಂತಿಸಬೇಕಾಗಿಲ್ಲ, ನಾನು ನಿಮ್ಮೊಂದಿಗಿದ್ದೇನೆ: ಟಿಎಂಸಿ ಮತ್ತು ಶಿವಸೇನಾ ಬಂಡಾಯ ಸಂಸದರಿಗೆ ಪ್ರಧಾನಿ ಮೋದಿ ಅಭಯ | PM Modi

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on
ನವದೆಹಲಿ: ಮಳೆಗಾಲದ ಸಂಸತ್ ಅಧಿವೇಶನ ನಡೆಯುತ್ತಿರುವ ನಡುವೆ ಇಂದು(ಆ. 07) ಎನ್​ಡಿಎ ಸಂಸದರೊಂದಿಗೆ ಉಪಹಾರ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ(PM Modi) ಅವರು, ಚಿಂತಿಸಬೇಕಾಗಿಲ್ಲ, ನಾನು ನಿಮ್ಮೊಂದಿಗಿದ್ದೇನೆ ಎಂದು ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಉದ್ದವ್ ಠಾಕ್ರೆ ಬಣದ ಬಂಡಾಯ ಸಂಸದರಿಗೆ ಅಭಯ ನೀಡಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಶಿವಸೇನೆಯ ಏಳು ಮಂದಿ, ರಾಷ್ಟ್ರೀಯ ನಾಗರಿಕರ ಪಕ್ಷ (ಎನ್‌ಸಿಪಿಐ) ದ 20 ಮಂದಿ ಮತ್ತು ಎನ್‌ಸಿಪಿ (ಅಜಿತ್ ಪವಾರ್) ದ ಇಬ್ಬರು ಸಂಸದರು ಸೇರಿದಂತೆ ಸುಮಾರು 45 ಸಂಸದರು ಉಪಾಹಾರ ಸಭೆಯಲ್ಲಿ ಉಪಸ್ಥಿತರಿದ್ದರು.
ಉಪಹಾರ ಸಭೆಯಲ್ಲಿ ಸಂಸತ್ತನ್ನು ಪ್ರಜಾಪ್ರಭುತ್ವದ ಸರ್ವೋಚ್ಚ ದೇವಾಲಯ ಎಂದು ಪ್ರತಿಪಾದಿಸಿರುವ ಪ್ರಧಾನಿ ಮೋದಿ, ಇತ್ತೀಚೆಗೆ ಸದನ ಸರಿಯಾಗಿ ನಡೆಯದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಮತ್ತು ಹೊಸದಾಗಿ ಆಯ್ಕೆಯಾದ ಸಂಸದರಿಗೆ ಸಂಸತ್ತಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
ಕಲಾಪಗಳಲ್ಲಿ ಗದ್ದಲದಿಂದಾಗಿ ಹೊಸ ಸಂಸದರಿಗೆ ಸದನದಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ ಇದು ಅನ್ಯಾಯ ಎಂದಿರುವ ಅವರು, ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯಬೇಕು. ಸಂಸತ್ತಿನ ಇತಿಹಾಸವನ್ನು ಓದಿ, ಕಲಿಯಿರಿ ಮತ್ತು ಅರ್ಥಮಾಡಿಕೊಳ್ಳಿ. ಸಂಸತ್ತಿನಲ್ಲಿ ಐತಿಹಾಸಿಕ ಸಾಮಗ್ರಿಗಳ ಸಂಪತ್ತು ಹೇರಳವಾಗಿದೆ. ಅದನ್ನು ಚರ್ಚೆಗಳನ್ನು ಸಿದ್ಧಪಡಿಸಲು ಬಳಸಿ. ನಿಮ್ಮ ನಿಮ್ಮ ರಾಜ್ಯಗಳ ಅಭಿವೃದ್ಧಿಗಾಗಿ ಕೆಲಸ ಮಾಡಿ. ರಾಜ್ಯಗಳು ಪ್ರಗತಿ ಸಾಧಿಸಿದಾಗ ಮಾತ್ರ ದೇಶವು ಪ್ರಗತಿ ಹೊಂದುತ್ತದೆ ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ಟಿಎಂಸಿ 20 ಬಂಡಾಯ ಸಂಸದರು ಮತ್ತು ಶಿವಸೇನೆಯ ಆರು ಸಂಸದರಿಗೆ, ನೀವೇನೂ ಚಿಂತಿಸಬೇಡಿ. ನಾನು ನಿಮ್ಮೊಂದಿಗಿದ್ದೇನೆ. ಎನ್‌ಡಿಎ ಒಂದು ಕುಟುಂಬ. ನಾವು ಘಟಕ ಪಕ್ಷಗಳೊಂದಿಗಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸಲಾಗುವುದು ಮತ್ತು ಅವಕಾಶ ನೀಡಲಾಗುವುದು. ನಾನು ಎನ್‌ಡಿಎಯ ಪ್ರತಿಯೊಬ್ಬ ಸಂಸದರೊಂದಿಗೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನಿಮ್ಮ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗಾಗಿ ನೇರವಾಗಿ ಪ್ರಧಾನ ಮಂತ್ರಿ ಕಚೇರಿಯನ್ನು ಸಂಪರ್ಕಿಸಿ. ಬಡ ಕಾರ್ಮಿಕರು ಮತ್ತು ರೈತರು ಸೇರಿದಂತೆ ಎಲ್ಲರನ್ನೂ ಭೇಟಿ ಮಾಡಿ ಮತ್ತು ಎಲ್ಲರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಿ ಎಂದಿದ್ದಾರೆ. ಜೊತೆಗೆ ತಿಯೊಬ್ಬ ಸಂಸದರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net