ಪ್ರಧಾನಿ ಮೋದಿ ತನ್ನದೇ ದೇಶದ ನಾಗರಿಕರ ವಿರುದ್ಧ ಹೋರಾಡುತ್ತಿದ್ದಾರೆ: ಅರವಿಂದ್ ಕೇಜ್ರಿವಾಲ್ ಕಿಡಿ | Arvind Kejriwal

ಪ್ರಧಾನಿ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್
ಪ್ರಧಾನಿ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್
Published on
ನವದೆಹಲಿ: ಪ್ರಧಾನಿ ಮೋದಿಯವರ ವಿಡಿಯೋವನ್ನು ಕಣ್ಮರೆಯಾಗಿಸಿದ್ದು, ಅದಕ್ಕೆ ಸಂಬಂಧಪಟ್ಟಂತೆ ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ಕ್ಷಮೆಯಾಚಿಸಿದ್ದಾರೆ ಎಂಬ ವರದಿ ನಡುವೆ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಭಾರತದ ಪ್ರಧಾನಿ ಮೋದಿ ತನ್ನದೇ ದೇಶದ ನಾಗರಿಕರ ವಿರುದ್ಧ ಹೋರಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ಸಬಿರ್ ಬಾಟಿಯಾ, ಅವರ ಅಮೆರಿಕದಲ್ಲಿ, ಬಳಕೆದಾರರ ಗೌಪ್ಯತೆ, ಪೈಪೋಟಿ, ಕೇಂಬ್ರಿಡ್ಜ್ ಅನಲಿಟಿಕಾ, ಮಕ್ಕಳ ಸುರಕ್ಷತೆ ಮತ್ತು ವಿಷಯ ನಿಯಂತ್ರಣದ ವಿಷಯಗಳ ಕುರಿತು ಕಾಂಗ್ರೆಸ್ ಮೆಟಾವನ್ನು ಪ್ರಶ್ನಿಸಿದೆ.
ಆದರೆ ಭಾರತದಲ್ಲಿ, ತಾಂತ್ರಿಕ ದೋಷವೊಂದರಿಂದಾಗಿ ಪ್ರಧಾನ ಮಂತ್ರಿಯವರ ವೀಡಿಯೊವೊಂದು ಅಲ್ಪಕಾಲದವರೆಗೆ ಲಭ್ಯವಿಲ್ಲದಂತಾದ ಕಾರಣಕ್ಕಾಗಿ ಮೆಟಾವನ್ನು ಪ್ರಶ್ನಿಸಲಾಗುತ್ತಿದೆ ಎಂಬ ಪೋಸ್ಟ್ ಅನ್ನು ಮರು ಹಂಚಿಕೊಂಡು ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಾರೆ.
ಎಕ್ಸ್​ನಲ್ಲಿ ಭಾರತದ ಪ್ರಧಾನ ಮಂತ್ರಿಯವರು ಈಗ ತಮ್ಮದೇ ದೇಶದ ನಾಗರಿಕರ ವಿರುದ್ಧ ಹೋರಾಡುತ್ತಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಾನೂನುಗಳನ್ನು ರೂಪಿಸುತ್ತಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು 'E20' ಮುಂತಾದ ಸಮಸ್ಯೆಗಳ ಸಂತ್ರಸ್ತರಾದ ಬಳಿಕ ಹಿಂದೆ ಅವರನ್ನು ಉತ್ಸಾಹದಿಂದ ಬೆಂಬಲಿಸುತ್ತಿದ್ದವರೇ ಈಗ ವೇಗವಾಗಿ ಅವರ ವಿರುದ್ಧ ತಿರುಗಿಬೀಳುತ್ತಿದ್ದಾರೆ ಎಂದಿದ್ದಾರೆ.

ಮಾರ್ಕ್​ ಜುಕರ್​ಬರ್ಗ್​ ಕ್ಷಮೆ!

ಪ್ರಧಾನಿ ಮೋದಿ ದೇಶದ ಝೆನ್​-ಜಿ ಗಳನ್ನು ಉದ್ದೇಶಿಸಿ ಹಂಚಿಕೊಂಡಿದ್ದ ವಿಡಿಯೋವೊಂದನ್ನು ಮೆಟಾ ಇಂಡಿಯಾ ಸುಮಾರು 5 ಗಂಟೆಗಳವರೆಗೆ ಈ ವಿಡಿಯೋವನ್ನು ಯಾರು ನೋಡದಂತೆ ಮಾಡಿತ್ತು. ಇದರಿಂದ ಸಿಟ್ಟಿಗೆದ್ದ ಮಾಹಿತಿ ತಂತ್ರಜ್ಞಾನ ಸಚಿವ ನಿಶಿಕಾಂತ್​ ದುಬೆ ಮಾರ್ಕ್​ ಜುಕರ್​ಬರ್ಗ್, ಪ್ರಧಾನಿ ಅವರಲ್ಲಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದರು.

ಕ್ಷಮೆ ಕೇಳದೆ ಹೋದರೆ. ಸೇಫ್​ ಹಾರ್ಬ್​ರ್ ರಕ್ಷಣೆಯನ್ನು ನಿಲ್ಲಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈ ಬೆದರಿಕೆ ಹಿನ್ನಲೆ ಎಚ್ಚೆತ್ತುಕೊಂಡ ಮೆಟಾ ಮುಖ್ಯಸ್ಥ, ಮಾರ್ಕ್​ ಜುಕರ್​ಬರ್ಗ್​ ತಮ್ಮ ವೇದಿಕೆಯಿಂದಾದ ತಾತ್ಕಾಲಿಕ ದೋಷಕ್ಕೆ ಕ್ಷಮೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ (ಏಜನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net