ವಂದೇ ಭಾರತ್​ ರೈಲಿನಲ್ಲಿ 'ನಾಗಪ್ಪ': ಶೌಚಾಲಯದಲ್ಲಿ ಹಾವು ಬಿಟ್ಟವನ ಹೆಡೆಮುರಿ ಕಟ್ಟಿದ ರೈಲ್ವೆ ಪೊಲೀಸ್​ | Vande Bharat

ವಂದೇ ಭಾರತ್ ರೈಲಿನಲ್ಲಿ ಹಾವು ಬಿಟ್ಟವನನ್ನು ಬಂಧಿಸಿದ ರೈಲ್ವೆ ಪೊಲೀಸರು
ವಂದೇ ಭಾರತ್ ರೈಲಿನಲ್ಲಿ ಹಾವು ಬಿಟ್ಟವನನ್ನು ಬಂಧಿಸಿದ ರೈಲ್ವೆ ಪೊಲೀಸರು
Published on

ಪ್ರಮುಖ ಮುಖ್ಯಾಂಶಗಳು

  • ಡಿಸೆಂಬರ್ 27, 2025 ರಂದು ಮುಂಬೈ-ಸೋಲಾಪುರ ವಂದೇ ಭಾರತ್ ರೈಲಿನಲ್ಲಿ ಹಾವನ್ನು ಬಿಟ್ಟಿದ್ದ ಕಿರಾತಕ
  • ವಂದೇ ಭಾರತ್ ರೈಲಿನಲ್ಲಿ ಹಾವು ಬಿಟ್ಟವನನ್ನು ಬಂಧಿಸಿದ ರೈಲ್ವೆ ಪೊಲೀಸರು
  • ಬಂಧಿತ ವ್ಯಕ್ತಿ ನಾಸಿಕ್​ ನಿವಾಸಿ ಜಗನ್ ಅರ್ಜುನ್ ಭಲೆ ಎಂದು ಪತ್ತೆ
ಮುಂಬೈ: ಡಿಸೆಂಬರ್ 27, 2025 ರಂದು ಮುಂಬೈ-ಸೋಲಾಪುರ ವಂದೇ ಭಾರತ್ (Vande Bharat) ಎಕ್ಸ್‌ಪ್ರೆಸ್‌ನಲ್ಲಿ ರೈಲಿನಲ್ಲಿ ಹಾವನ್ನು ಬಿಟ್ಟ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೇಂದ್ರ ರೈಲ್ವೆಯ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಬಂಧಿಸಿದೆ ಎಂದು ವರದಿಯಾಗಿದೆ.
ಬಂಧಿತ ವ್ಯಕ್ತಿಯನ್ನು ನಾಸಿಕ್ ನಿವಾಸಿ,37 ವರ್ಷದ ಜಗನ್ ಅರ್ಜುನ್ ಭಲೆ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಗುರುವಾರ (ಫೆ.12) ಮುಂಬ್ರಾದಿಂದ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿಸೆಂಬರ್ 27, 2025 ರಂದು ರೈಲು ಸಂಖ್ಯೆ 22225, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕೋಚ್ ಸಿ 16 ರ ಶೌಚಾಲಯದಲ್ಲಿ ಹಾವು ಕಂಡುಬಂದಿದೆ ಎಂದು ಸೆಂಟ್ರಲ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಸ್ವಪ್ನಿಲ್ ನೀಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಂತರ ಸೋಲಾಪುರ ನಿಲ್ದಾಣದಲ್ಲಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು ಎಂದು ಅವರು ಹೇಳಿದರು.
ನಂತರ ಸಿಸಿಟಿವಿ ದೃಶ್ಯಾವಳಿಯನ್ನು ಪರಿಕ್ಷೀಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ಶೌಚಾಲಯದಲ್ಲಿ ಹಾವನ್ನು ಇಟ್ಟಿರುವುದು ಕಂಡುಬಂದಿದೆ. ರೈಲ್ವೆ ಕಾಯ್ದೆ 1989 ರ ಸೆಕ್ಷನ್ 145 (ಬಿ), 147 ಮತ್ತು 153 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಪ್ರಕರಣದ ತನಿಖೆ ಆರಂಭವಾಗಿದೆ ಎಂದು ಸಿಪಿಆರ್‌ಒ ಹೇಳಿದರು.
ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಮತ್ತು ಮಾಹಿತಿದಾರರ ಸುಳಿವು ಮೇರೆಗೆ ಆರ್‌ಪಿಎಫ್ ತಂಡವು ಕಾರ್ಯಪ್ರವೃತ್ತರಾಗಿ ಮುಂಬ್ರಾದ ಜಗನ್ ಅರ್ಜುನ್ ಭಲೆ ಎಂಬ ಆರೋಪಿಯನ್ನು ಬಂಧಿಸಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದು, ಆತನನ್ನು ಕಲ್ಯಾಣ್‌ನಲ್ಲಿರುವ ರೈಲ್ವೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿ 14 ದಿನಗಳ ಮ್ಯಾಜಿಸ್ಟೀರಿಯಲ್ ಕಸ್ಟಡಿ ರಿಮಾಂಡ್ (ಎಂಸಿಆರ್) ಪಡೆಯಲಾಯಿಗಿದ್ದು,ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net