ಎನ್‌ಸಿಪಿಐಯಲ್ಲಿ ಟಿಎಂಸಿ ರೆಬಲ್ ಸಂಸದರ ವಿಲೀನ: ಅಮಿತ್ ಶಾ ಅವರೇ ಕಾರಣ ಎಂದು ಕಾಂಗ್ರೆಸ್ ಕಿಡಿ | Congress

ಅಮಿತ್ ಶಾ ಮತ್ತು ಜೈರಾಮ್ ರಮೇಶ್
ಅಮಿತ್ ಶಾ ಮತ್ತು ಜೈರಾಮ್ ರಮೇಶ್
Published on
ನವದೆಹಲಿ: ತೃಣಮೂಲ ಕಾಂಗ್ರೆಸ್‌ನ 20 ಬಂಡಾಯ ಸಂಸದರು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಜೊತೆ ವಿಲೀನವಾಗಿರುವುದಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಕಾರಣ, ಅವರೇ ಅಕ್ರಮ ವಿಭಜನೆಯ ಸೂತ್ರಧಾರಿ ಎಂದು ಸೋಮವಾರ(ಜೂ.15) ಕಾಂಗ್ರೆಸ್(Congress) ಆರೋಪಿಸಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಟಿಎಂಸಿಯ 20 ಸಂಸದರ ಅಕ್ರಮ ಬೇರ್ಪಡುವಿಕೆ ಮತ್ತು ಕೇವಲ ಮೂರು ವರ್ಷಗಳ ಹಿಂದೆ ಸ್ಥಾಪಿತವಾದ, ಕೇಳಿರದ ಹಾಗೂ ವರದಿಯಾಗಿರುವ ನೋಂದಾಯಿತ ಆದರೆ ಗುರುತಿಸಲಾಗದ ರಾಜಕೀಯ ಸಂಘಟನೆಯೊಂದಿಗೆ ಅವರ ಸಂಪೂರ್ಣ ಪ್ರಶ್ನಾರ್ಹ ವಿಲೀನದ ಮಾಸ್ಟರ್ ಶಾ ಅವರೇ ಎಂದು ಕಿಡಿಕಾರಿದ್ದಾರೆ.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಹೊಂದಿದ್ದ ಸ್ಥಾನಕ್ಕೆ ಸಂಪೂರ್ಣ ಅವಮಾನಕರವಾದ ರೀತಿಯಲ್ಲಿ ಮತ್ತು ನಾಚಿಕೆಯಿಲ್ಲದೇ ಕೇಂದ್ರ ಗೃಹ ಸಚಿವರು ಭಾರತದ ಪ್ರಜಾಪ್ರಭುತ್ವವನ್ನು ಕೆಳಮಟ್ಟಕ್ಕೆ ಕೊಂಡೋಯ್ಯುತ್ತಿದ್ದಾರೆ.
ಈ ವಿಚಿತ್ರ ನಡೆ ಲೋಕಸಭೆಯಲ್ಲಿ ಎನ್‌ಡಿಎಗೆ ಮೂರನೇ ಎರಡರಷ್ಟು ಬಹುಮತವನ್ನು ರೂಪಿಸುವ ಕೇಂದ್ರ ಗೃಹ ಸಚಿವರ ಕಾರ್ಯತಂತ್ರದ ಭಾಗವಾಗಿದೆ. ಅಧಿಕಾರದಲ್ಲಿ ಮುಂದುವರಿಯುವ ಪ್ರತಿದಿನವೂ ಸಭ್ಯತೆ, ಸಾಂವಿಧಾನಿಕ ಮೌಲ್ಯಗಳು ಹಾಗೂ ತತ್ವಗಳು ದುರ್ಬಲವಾಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ, ತೃಣಮೂಲ ಕಾಂಗ್ರೆಸ್​​ನ 20 ಬಂಡಾಯ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ತ್ರಿಪುರಾ ಮೂಲದ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷವಾದ ಎನ್‌ಸಿಪಿಐ ಜೊತೆ ವಿಲೀನಗೊಳ್ಳುತ್ತಿರುವುದಾಗಿ ಘೋಷಿಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net