ದೆಹಲಿ-ತಿರುವನಂತಪುರಂ ಎಕ್ಸ್‌ಪ್ರೆಸ್‌ನಲ್ಲಿ ಭಾರೀ ಅಗ್ನಿ ದುರಂತ: ಹೊತ್ತಿ ಉರಿದ ಎಸಿ ಬೋಗಿ, ಪಾರಾದ ಪ್ರಯಾಣಿಕರು | fire tragedy

ರೈಲಿನ ಬೋಗಿ ಹೊತ್ತಿ ಉರಿಯುತ್ತಿರುವುದು.
ರೈಲಿನ ಬೋಗಿ ಹೊತ್ತಿ ಉರಿಯುತ್ತಿರುವುದು.
Published on
ಕೋಟ: ರಾಜಸ್ಥಾನದ ಕೋಟದಲ್ಲಿ ದೆಹಲಿಗೆ ತೆರಳುತ್ತಿದ್ದ ದೆಹಲಿ-ತಿರುವನಂತಪುರಂ ರಾಜಧಾನಿ ಎಕ್ಸ್​ಪ್ರೆಸ್​ನ ಎಸಿ ಬೋಗಿಯೊಂದರಲ್ಲಿ ಭಾರೀ ಅಗ್ನಿ ಅವಘಡ(Massive fire tragedy) ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ, ಬೋಗಿಯಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಅಧಿಕಾರಿಗಳು, ಕೋಟಾದ ವಿಕ್ರಮ್‌ಗಢ ಅಲೋಟ್ ರೈಲು ನಿಲ್ದಾಣದ ಬಳಿ ಬೆಳಿಗ್ಗೆ 5:15ರ ಸುಮಾರಿಗೆ ಬಿ -1 ಕೋಚ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೋಗಿಯಲ್ಲಿ 68 ಪ್ರಯಾಣಿಕರಿದ್ದರು ಎನ್ನಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಸುರಕ್ಷಿತವಾಗಿ ಇಳಿಸಿ, ಕೋಟಾವರೆಗಿನ ಪ್ರಯಾಣಕ್ಕಾಗಿ ಅವರನ್ನು ಇತರ ಬೋಗಿಗಳಲ್ಲಿ ಇರಿಸಲಾಯಿತು ಎಂದು ಹೇಳಿದ್ದಾರೆ.
ಇನ್ನೂ ಹಾನಿಗೊಳಗಾದ ಬೋಗಿಯನ್ನು ರೇಕ್‌ನಿಂದ ಬೇರ್ಪಡಿಸಲಾಯಿತು. ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಓವರ್ಹೆಡ್ ವಿದ್ಯುತ್ ಸರಬರಾಜು (OHE) ಅನ್ನು ತಕ್ಷಣವೇ ಆಫ್ ಮಾಡಲಾಯಿತು. ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರೈಲ್ವೆ ನೌಕರರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಸಿಬ್ಬಂದಿ ಬೋಗಿಯ ಅವಶೇಷಗಳನ್ನು ಹಳಿಯಿಂದ ತೆರವುಗೊಳಿಸಲು ಕೆಲಸ ಮಾಡ್ತಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net