ಸದ್ಯದ ಮಾಹಿತಿಯ ಪ್ರಕಾರ ಮುಂಬೈನ 227 ಸ್ಥಾನಗಳ ಪೈಕಿ 210 ಸ್ಥಾನಗಳಿಗೆ ಬಿಜೆಪಿ 84 ಸ್ಥಾನ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 26, ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಕೇವಲ ಮೂರು ವಾರ್ಡ್ಗಳಲ್ಲಿ ಮಾತ್ರ ಮುಂದಿವೆ. ಇತ್ತ ವಿರೋಧ ಪಕ್ಷದ ಪಾಳಯದಲ್ಲಿ, ಶಿವಸೇನೆ (ಯುಬಿಟಿ) ಮತ್ತು ಅದರ ಮಿತ್ರ ಪಕ್ಷ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕ್ರಮವಾಗಿ 72 ಮತ್ತು 10 ವಂಚಿತ್ ಬಹುಜನ ಅಘಾಡಿ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಕಾಂಗ್ರೆಸ್ 23 ವಾರ್ಡ್ಗಳಲ್ಲಿ ಮತ್ತು ಇತರರು 9 ರಲ್ಲಿ ಮುಂದಿದ್ದಾರೆ.