ಉದ್ಧವ್ ಮತ್ತು ರಾಜ್ ಠಾಕ್ರೆ ಒಂದಾಗುತ್ತಿದ್ದಂತೆ ಮಹಾರಾಷ್ಟ್ರದ ರಾಜಕೀಯ ಚಿತ್ರಣ ತಿರುವು ಪಡೆದುಕೊಂಡಿತು, ಠಾಕ್ರೆ ಕುಟುಂಬದ ಪ್ರಭಾವ ಇರುವ ಕಡೆಗಳಲ್ಲಿನ ವಿರೋಧಿಗಳ ಪಾಲಿಗೆ ಇದು ನುಂಗಲಾರದ ತುತ್ತಾಗಿತ್ತು. ಇಬ್ಬರು ಸಹೋದರರು ಹೆಚ್ಚೆಚ್ಚು ಪ್ರಚಾರ ನಡೆಸುವ ಮೂಲಕ ಮರಾಠಿ ಮತಗಳನ್ನು ಕ್ರೋಢೀಕರಿಸಲು ಮತ್ತು ಉದ್ಧವ್ ತಂದೆ ಬಾಳ್ ಠಾಕ್ರೆ ಅವರ ಪರಂಪರೆಯನ್ನು ಮುಂದುವರೆಸುವ ಲಕ್ಷಣವಾಗಿ ನೋಡಲಾಯಿತು.