ಕೋಝಿಕ್ಕೋಡ್‌ನ ಪೆರುವಯಲ್‌ನಲ್ಲಿ ಜನಿಸಿದ ಫಾತಿಮಾ ತಹ್ಲಿಯಾ, ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಹಾದಿಯಲ್ಲಿ ಬೆಳೆದವರು. ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್ (MSF) ಮೂಲಕ ರಾಜಕೀಯ ಪ್ರವೇಶಿಸಿದ ಇವರು, ಬಳಿಕ ಕೋಝಿಕ್ಕೋಡ್ ಕಾರ್ಪೊರೇಶನ್‌ನಲ್ಲಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದರು. ಸದ್ಯ ಮುಸ್ಲಿಂ ಯೂತ್ ಲೀಗ್‌ನ ರಾಜ್ಯ ಕಾರ್ಯದರ್ಶಿಯಾಗಿರುವ ಇವರು, ವೃತ್ತಿಯಲ್ಲಿ ವಕೀಲರು. ಕೋಝಿಕ್ಕೋಡ್ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಬಿಎ ಎಲ್‌ಎಲ್‌ಬಿ ಮುಗಿಸಿ, ತೃಶ್ಯೂರ್‌ನಲ್ಲಿ ಎಲ್‌ಎಲ್‌ಎಂ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸದ್ಯ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲೆಯಾಗಿ ಕೆಲಸ ಮಾಡುತ್ತಿದ್ದಾರೆ.