ಕೇರಳದಲ್ಲಿ ಖಾತೆ ತೆರೆದ ಬಿಜೆಪಿ: ರಾಜೀವ್​ ಚಂದ್ರಶೇಖರ್​; ಗೋಪಾಲ್​ ಕುಮಾರ್​ ಜಯಭೇರಿ! Kerala Election Results

ಕೇರಳದಲ್ಲಿ ಖಾತೆ ತೆರೆದ ಬಿಜೆಪಿ
ಕೇರಳದಲ್ಲಿ ಖಾತೆ ತೆರೆದ ಬಿಜೆಪಿ
Published on
ಕೇರಳ: ಇಂದು (ಮೇ.4) ಭಾರತದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಕೇರಳದ 140 ವಿಧಾನಸಭಾ ಕ್ಷೇತ್ರಗಳ (Kerala Election Results) ಭವಿಷ್ಯ ಇವತ್ತೇ ಹೊರಬೀಳಲಿದೆ.

ಖಾತೆ ತೆರೆದ ಬಿಜೆಪಿ!

2021 ರ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸುತ್ತಿದ್ದ ಬಿಜೆಪಿ. ಈ ಭಾರಿಯ ಚುನಾವಣೆಯಲ್ಲಿ 2 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದೆ. ನಿಮೊಮ್​ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್​ ಚಂದ್ರಶೇಖರ್​ ಗೆಲುವನ್ನು ಸಾಧಿಸಿದ್ದಾರೆ. ಸುಮಾರು 2,000 ಮತಗಳ ಅಂತರದಿಂದ ಇವರು ಸಿಪಿಎಮ್​ ನ ಶಿವಕುಟ್ಟಿ ಅವರನ್ನು ಸೋಲಿಸಿದ್ದಾರೆ.
ಹಾಗೆಯೇ ಚತ್ತನೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿ.ಬಿ. ಗೋಪಾಲ್​ ಕುಮಾರ್​ ಸುಮಾರು 4,000 ಮತಗಳ ಅಂತರದಲ್ಲಿ ಆರ್​. ರಾಜೇಂದ್ರನ್​ ಅವರನ್ನು ಪರಾಭವಗೊಳಿಸಿದ್ದಾರೆ.

ನೂರು ದಾಟಿದ ಯುಡಿಎಫ್​!

ಈ ಭಾರಿ 140 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಯುಡಿಎಫ್​ 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ವಿಜಯನ್​ ನೇತೃತ್ವದ ಎಲ್​ಡಿಎಫ್​ 38 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಎನ್​ಡಿಎ ಹಾಗೂ ಇತರೆ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ 71 ಕ್ಷೇತ್ರಗಳಲ್ಲಿ ಗೆಲ್ಲುವ ಪಕ್ಷ ಸರ್ಕಾರ ರಚಿಸಲಿದ್ದು, ಯುಡಿಎಫ್​ 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಹಿನ್ನಲೆ ಗೆಲುವು ಬಹುತೇಕ ಖಚಿತವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net