ಇನ್ನು, ತಮ್ಮನ್ನು ಕೇವಲ ಫೋಟೋ ತೆಗೆಸಿಕೊಳ್ಳಲು ಕರೆಯಲಾಗಿತ್ತು ಎಂಬ ಭಾವನೆ ಮೂಡಿದ್ದಕ್ಕೆ ಕಪಿಲ್ ಬೇಸರಗೊಂಡಿದ್ದಾರೆ. ‘ನಾನು ಕೇವಲ ಫೋಟೋಗಾಗಿ ಬರಬೇಕಿತ್ತು ಅಂತ ಮೊದಲೇ ಹೇಳಿದ್ದರೆ, ಅದಕ್ಕೆ ತಕ್ಕಂತೆ ಪ್ರತ್ಯೇಕ ಟೈಂ ಕೊಡುತ್ತಿದ್ದೆ. ಕಾರ್ಯಕ್ರಮಕ್ಕೆ ಅಂದರೆ ಕೆಲವು ರೂಲ್ಸ್ ಇರಬೇಕು’ ಎಂದು ಕಪಿಲ್ ದೇವ್ ಹೇಳಿದ್ದಾರೆ. ಕಪಿಲ್ ದೇವ್ ಅವರ ಈ ನೇರ ಮಾತುಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರ್ಯಕ್ರಮಗಳಲ್ಲಿ ಶಿಸ್ತು, ವ್ಯವಸ್ಥೆ ಮತ್ತು ಶಿಕ್ಷಕರಿಗೆ ಗೌರವ ನೀಡುವ ಅಗತ್ಯದ ಬಗ್ಗೆ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.