ನವದೆಹಲಿ/ಟೆಹ್ರಾನ್: ಮಧ್ಯಪ್ರಾಚ್ಯ ಅಕ್ಷಶಃ ರಣರಂಗವಾಗಿ ಬದಲಾಗಿದ್ದು, ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಕಚೇರಿಗಳನ್ನೇ ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದ ಬೆನ್ನಲ್ಲೇ, ಇಡೀ ವಿಶ್ವದ ಕಣ್ಣು ಈಗ ಭಾರತದ ಮೇಲಿದೆ. ಈ ಸ್ಫೋಟಕ ಬೆಳವಣಿಗೆಯ ಬಗ್ಗೆ ಭಾರತ ಸರ್ಕಾರ (India Statement) ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಂಯಮ ಕಾಯ್ದುಕೊಳ್ಳುವಂತೆ ಜಗತ್ತಿನ ರಾಷ್ಟ್ರಗಳಿಗೆ ಕರೆ ನೀಡಿದೆ.