ನಾನು ಭಾರತೀಯಳಾಗಿಯೇ ಸಾಯಬೇಕು! ಅಮೆರಿಕ ಪೌರತ್ವ ತ್ಯಜಿಸಿ ಸ್ವದೇಶಕ್ಕೆ ಮರಳಿದ 94 ರ ಅಜ್ಜಿ; ಸೋಷಿಯಲ್ ಮೀಡಿಯಾ ಟ್ರೆಂಡ್ ಆದ ಆಂಧ್ರದ ಮಹಾಲಕ್ಷ್ಮಮ್ಮ! Mahalakshmamma
ನಾನು ಭಾರತೀಯಳಾಗಿಯೇ ಸಾಯಬೇಕು: ಮಹಾಲಕ್ಷ್ಮಮ್ಮ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಾನು ಭಾರತೀಯಳಾಗಿಯೇ ಸಾಯಬೇಕು: ಮಹಾಲಕ್ಷ್ಮಮ್ಮ
ಅಮೆರಿಕದ ಪೌರತ್ವವನ್ನು ಸ್ವಇಚ್ಛೆಯಿಂದ ತ್ಯಜಿಸಿ ತಾಯ್ನಾಡಿಗೆ ಮರಳಿದ ಆಂಧ್ರಪ್ರದೇಶದ 94 ವರ್ಷದ ಅಜ್ಜಿ
ಆಂಧ್ರದ ಮಹಾಲಕ್ಷ್ಮಮ್ಮ ಅವರ ದೇಶಪ್ರೇಮಕ್ಕೆ ಜನ ಫಿದಾ
ಆಂಧ್ರಪ್ರದೇಶ: ಭಾರತವನ್ನು ಬಿಟ್ಟು ಅಮೆರಿಕ, ಲಂಡನ್, ನ್ಯೂಯಾರ್ಕ್, ಜರ್ಮನಿ ಮೊದಲಾದ ದೇಶಗಳಿಗೆ ತೆರಳಿ ಅಲ್ಲಿಯೇ ಸೆಟಲ್ ಆಗಬೇಕು ಎನ್ನುವುದು ಅನೇಕರಲ್ಲಿ ಇರುವ ಆಸೆಗಳಲ್ಲಿ ಒಂದಾಗಿದೆ.
ಆದರೆ, ಆಂಧ್ರಪ್ರದೇಶ ಮೂಲಕ 94 ವಯಸ್ಸಿನ ಕೊಂಡ್ರಗುಂಟ ಮಹಾಲಕ್ಷ್ಮಮ್ಮ (Kondragunta Mahalakshmamma) ಎನ್ನುವ ಮಹಿಳೆ ತನ್ನ ಅಮೆರಿಕದ ಪೌರತ್ವವನ್ನು ತ್ಯಜಸಿ, ಭಾರತಕ್ಕೆ ಮರಳಲು ಮುಂದಾಗಿದ್ದು, ನಾನೊಬ್ಬಳು ಭಾರತೀಯಳಾಗಿಯೇ ಸಾಯುತ್ತೆನೆಂದು ಹೇಳಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಮಹಾಲಕ್ಷ್ಮಮ್ಮ, ಮೂಲತಃ ಚಿನಗಂಜಾಂ ಮಂಡಲದ ಚಿಂತಗುಂಪಲ ಗ್ರಾಮದವರಾಗಿದ್ದು, ತಮ್ಮ ಪತಿಯ ನಿಧನದ ನಂತರ ಮಗನೊಂದಿಗೆ ಅಮೆರಿಕಾಗೆ ತೆರಳಿದರು. 2000 ನೇ ಇಸವಿಯಲ್ಲಿ ಇವರಿಗೆ ಅಮರಿಕದಿಂದ ಪೌರತ್ವವನ್ನು ಪಡೆದುಕೊಂಡರು.
ನಂತರ 2018 ರಲ್ಲಿ ಭಾರತಕ್ಕೆ ಮರಳಿದ ಮಹಾಲಕ್ಷ್ಮಮ್ಮ ತಮ್ಮ ಊರಲ್ಲಿಯೇ ಸೆಟೆಲ್ ಆಗಿದ್ದಾರೆ. ಆಮೇಲೆ ಜಿಲ್ಲಾಡಳಿತವನ್ನು ಸಂಪರ್ಕಿಸಿದ ಮಹಾಲಕ್ಷ್ಮಮ್ಮ ತಮ್ಮ ಸ್ವಇಚ್ಛೆಯಿಂದ ಅಮೆರಿಕದ ಪೌರತ್ವವನ್ನು ತ್ಯಜಿಸುವುದಾಗಿ ತಿಳಿಸಿದ್ದು, ತಮ್ಮ ಭಾರತೀಯ ಪೌರತ್ವವನ್ನು ಮರಳಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಜೂನ್ 23 ರಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮಹಾಲಕ್ಷ್ಮಮ್ಮ ಅವರಿಗೆ ವಿದೇಶಿ ಭಾರತೀಯ ನಾಗರಿಕ ಎಂಬ ಪೌರತ್ವವನ್ನು ನೀಡಲಾಗಿದ್ದು, ಅವರ ಅಮೆರಿಕದ ಪೌರತ್ವ ರದ್ದಾದ ಬಳಿಕ ಸಂಪೂರ್ಣ ಭಾರತೀಯ ಪೌರತ್ವ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ವಿ. ವಿನೋದ್ ಕುಮಾರ್ ತಿಳಿಸಿದ್ದಾರೆ. ಸದ್ಯ ಜಿಲ್ಲಾಧಿಕಾರಿಗಳು ವಿದೇಶಾಂಗ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು, ಆದಷ್ಟು ಬೇಗ ಈ ಅಜ್ಜಿಯನ್ನು ಭಾರತೀಯಳಾಗಿ ಮಾಡಲಿದ್ದೆವೆಂದು ಭರವಸೆ ನೀಡಿದ್ದಾರೆ.
ಈಗ ಈ ಮಹಾಲಕ್ಷ್ಮಮ್ಮ ಸೋಷಿಯಲ್ ಮೀಡಿಯಾನಲ್ಲಿ ಎಲ್ಲಾ ಕಡೆ ಟ್ರೆಂಡ್ ಆಗುತ್ತಿದ್ದು, ಇವರ ರಾಷ್ಟ್ರಪ್ರೇಮಕ್ಕೆ ನೆಟ್ಟಿಗರು ಸೆಲ್ಯೂಟ್ ಮಾಡುತ್ತಿದ್ದಾರೆ. ನೋಡಿ ಸುಮಾರು 20 ವರ್ಷ ವಿದೇಶದಲ್ಲಿದ್ದರೂ ಮುಕ್ತಿ ಎನ್ನುವುದು ಹುಟ್ಟಿದ ನೆಲದಲ್ಲಿ ಮಾತ್ರ ಸಿಗಲು ಸಾಧ್ಯ ಎನ್ನುವುದಕ್ಕೆ ಇವರೇ ನೈಜ ನಿದರ್ಶನ ಎಂದು ಹೇಳುತ್ತಿದ್ದಾರೆ,(ಏಜನ್ಸೀಸ್).