ಡೆನ್ಮಾರ್ಕ್ ಇಸ್ಲಾಮಾಬಾದ್​ನ ಉಪನಗರವಲ್ಲ..ಅಜಾನ್​ ಬ್ಯಾನ್​ಗೆ ಯೋಜನೆ; ಇಸ್ಲಾಮೀಕರಣದ ವಿರುದ್ಧ ಸಿಡಿದೆದ್ದ ಸರ್ಕಾರ! Azan Ban in Denmark

ಅಜಾನ್ ಸೇರಿದಂತೆ ಮುಸ್ಲಿಮರ ಧಾರ್ಮಿಕ ಪ್ರಾರ್ಥನೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಚಿಂತನೆ
ಅಜಾನ್ ಸೇರಿದಂತೆ ಮುಸ್ಲಿಮರ ಧಾರ್ಮಿಕ ಪ್ರಾರ್ಥನೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಚಿಂತನೆ
Published on

ಪ್ರಮುಖ ಮುಖ್ಯಾಂಶಗಳು

  • ಡೆನ್ಮಾರ್ಕ್‌ನಲ್ಲಿ ಹೆಚ್ಚುತ್ತಿರುವ ಇಸ್ಲಾಮೀಕರಣಕ್ಕೆ ಬ್ರೇಕ್ ಹಾಕಲು ಮುಂದಾದ ಸರ್ಕಾರ
  • ಅಜಾನ್ ಸೇರಿದಂತೆ ಮುಸ್ಲಿಮರ ಧಾರ್ಮಿಕ ಪ್ರಾರ್ಥನೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಚಿಂತನೆ
  • "ಡೆನ್ಮಾರ್ಕ್ ಇಸ್ಲಾಮಾಬಾದ್ ಉಪನಗರವಲ್ಲ" ಎಂದ ವಲಸೆ ಮಂತ್ರಿ ಮಾರ್ಟೆನ್ ಬೋಡ್ಸ್ಕೋವ್
ಡೆನ್ಮಾರ್ಕ್​: ದೇಶದಲ್ಲಿ ಇಸ್ಲಾಮೀಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಜಾನ್​ ಸೇರಿದಂತೆ ಮುಸ್ಲಿಮರ ಧಾರ್ಮಿಕ ಪ್ರಾರ್ಥನೆಗಳನ್ನು (Azan Ban in Denmark) ಸಂಪೂರ್ಣವಾಗಿ ನಿಷೇಧಿಸುವ ಕುರಿತು ಡೆನ್ಮಾರ್ಕ್​ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಡನ್ಮಾರ್ಕ್​ ಇಸ್ಲಾಮಾಬಾದ್​ನ ಉಪನಗರದಂತೆ ಭಾಸವಾಗುತ್ತಿದ್ದು, ಈ ಹಿನ್ನಲೆಯಲ್ಲಿ ನಮ್ಮ ದೇಶದ ನೆಲದಲ್ಲಿ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ವಲಸೆ ಮಂತ್ರಿ ಮಾರ್ಟೆನ್ ಬೋಡ್ಸ್ಕೋವ್ (Morten Bodskov) ಹೇಳಿಕೆ ನೀಡಿದ್ದಾರೆ.

ಡೆನ್ಮಾರ್ಕ್​ನ ಅತಿ ದೊಡ್ಡ ಅಲ್ಪಸಂಖ್ಯಾತರು!

ಡೆನ್ಮಾರ್ಕ್​ನಲ್ಲಿ ಇಸ್ಲಾಮೀಕರಣ ಹೆಚ್ಚುತ್ತಲಿದ್ದು, ದೇಶದ ಜನಸಂಖ್ಯೆಯಲ್ಲಿ ಶೇ.5 ರಷ್ಟು ಮುಸ್ಲಿಮರೇ ಇದ್ದು, ಇವರು ಡೆನ್ಮಾರ್ಕ್​ನಲ್ಲಿರುವ ಅತಿ ದೊಡ್ಡ ಅಲ್ಪಸಂಖ್ಯಾತರಾಗಿ ಪರಿವರ್ತನೆ ಆಗಿದ್ದಾರೆ. ಈ ವರ್ಷದ ಆರಂಭದಲ್ಲಿ ಡೆನ್ಮಾರ್ಕ್​ನಲ್ಲಿ ಮುಖ ಮುಚ್ಚಿಕೊಂಡು (ಹಿಜಾಬ್​, ನಖಾಬ್​, ಬುರ್ಖಾ ಧರಿಸುವುದು) ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಿದ್ಯಾಸಂಸ್ಥೆಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು.
ಡೆನ್ಮಾರ್ಕ್​ನ್ನು ಇಸ್ಲಾಮಾವಾದ್​ನ ಉಪನಗರ ಮಾಡುವ ಯಾವುದೇ ಯೋಚನೆ ನಿಮ್ಮ ತಲೆಯಲ್ಲಿದ್ದರೆ ಅದನ್ನು ತೆಗೆದು ಹಾಕಿಬಿಡಿ. ಇದಕ್ಕೆಲ್ಲಾ ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಮಾರ್ಟೆನ್ ಬೋಡ್ಸ್ಕೋವ್ ಖಡಕ್​ ಎಚ್ಚರಿಕೆ ನೀಡಿದ್ದಾರೆ.
ಅಜಾನ್​ ಬ್ಯಾನ್​ ಇದೇ ಮೊದಲಲ್ಲ!
ಡೆನ್ಮಾರ್ಕ್​ನಲ್ಲಿ ಆಜಾನ್​ ನಿಷೇಧದ ಕುರಿತು ಚರ್ಚೆ ಇದೇ ಮೊದಲೇನಲ್ಲ. 2020 ಮತ್ತು 2025 ರಲ್ಲಿ ಕೂಡ ಈ ಕುರಿತು ಚರ್ಚೆಯಾಗಿತ್ತು. ಆದರೆ ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿರಲಿಲ್ಲ. ಅದರೆ ಯುರೋಪಿನ ಹಲವು ದೇಶಗಳಲ್ಲಿ ಅಜಾನ್​ಗೆ ಕಠಿಣ ನೀತಿ-ನಿಯಮಗಳನ್ನು ವಿಧಿಸಲಾಗಿದೆ.
ಅಜಾನ್​ ಪ್ರಾರ್ಥನೆಯನ್ನು ಶಬ್ದ ಮಾಲಿನ್ಯ ಉಂಟಾಗದಂತೆ, ಇತರರಿಗೆ ತೊಂದರೆ ಆಗದಂತೆ ಪ್ರಾರ್ಥನೆ ಮಾಡಬೇಕೆಂದು ಹಲವೆಡೆ ನಿಯಮಗಳನ್ನು ರೂಪಿಸಲಾಗಿದೆ. ಹಾಗೆಯೇ ಮಸೀದಿ ಹೊರಗೆ, ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net