ಸಾಮ್ರಾಟ್ ಚೌಧರಿ ಸುಮಾರು 99.32 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿಯನ್ನು ಹೊಂದಿದ್ದು, ಇದರಲ್ಲಿ ಬ್ಯಾಂಕ್ ಖಾತೆಗಳ ಠೇವಣಿ, ಎಲ್ಐಸಿ ಹಾಗೂ ವಿವಿಧ ಜೀವವಿಮಾ ಯೋಜನೆಗಳ ಹೂಡಿಕೆಗಳು ಸೇರಿವೆ. ಅವರ ಬಳಿ ಒಂದೂವರೆ ಲಕ್ಷದಷ್ಟು ನಗದು ಹಣವಿದ್ದು, ಜೊತೆಗೆ 200 ಗ್ರಾಂ ತೂಕದ ಚಿನ್ನಾಭರಣಗಳನ್ನು ಹೊಂದಿದ್ದಾರೆ. ವಾಹನಗಳ ವಿಚಾರಕ್ಕೆ ಬಂದರೆ, ಅವರು 2023ರ ಮಾಡೆಲ್ನ ಸುಮಾರು ಏಳು ಲಕ್ಷ ರೂಪಾಯಿ ಮೌಲ್ಯದ ಬೊಲೆರೊ ನಿಯೋ ಕಾರನ್ನು ಬಳಸುತ್ತಿದ್ದಾರೆ.