MLC ಆಗಿ ಆಯ್ಕೆಯಾಗಲು ಒಪ್ಪಿಗೆ ನೀಡದ ರಾಜ್ಯಪಾಲರು; ಅತಂತ್ರ ಸ್ಥಿತಿಯಲ್ಲಿ ಎಂ.ಡಿ.ಅಜರುದ್ದೀನ್; ಸಚಿವ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ

ಎಂ.ಡಿ.ಅಜರುದ್ದೀನ್
ಎಂ.ಡಿ.ಅಜರುದ್ದೀನ್
Published on
ಹೈದರಾಬಾದ್​: ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ಸಚಿವರಾಗಿರುವ ಮಾಜಿ ಕ್ರಿಕೆಟಿಗ ಎಂ.ಡಿ.ಅಜರುದ್ದೀನ್ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದು, MLC ಆಗಲು ರಾಜ್ಯಪಾಲರು ಒಪ್ಪಿಗೆ ನೀಡದ ಹಿನ್ನೆಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
2025 ಅಕ್ಟೋಬರ್ 31ರಂದು ಅಜರುದ್ದೀನ್​ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಧಿಕಾರ ವಹಿಸಿಕೊಂಡ ಬಳಿಕ ನಿಗದಿತ 6 ತಿಂಗಳೊಳಗೆ ಯಾವುದೇ ವಿಧಾನಸಭೆ ಅಥವಾ ವಿಧಾನ ಪರಿಷತ್​ನ ಸದಸ್ಯರಾಗಿ ಆಯ್ಕೆಯಾಗಬೇಕಿತ್ತು. ಆದರೆ ಈವರೆಗೆ ಅವರು ಯಾವುದೇ ಸದನದ ಸದಸ್ಯರಾಗಿ ಆಯ್ಕೆಯಾಗಿಲ್ಲ ಮತ್ತು ನಾಮನಿರ್ದೇಶನಗೊಂಡಿಲ್ಲ.
2025 ಅಕ್ಟೋಬರ್​ನಲ್ಲಿ ಅವರನ್ನು ರಾಜ್ಯಪಾಲರ ಕೋಟದಡಿ ವಿಧಾನಪರಿಷತ್​ಗೆ ನಾಮನಿರ್ದೇಶನ ಮಾಡುವಂತೆ ಸಚಿವ ಸಂಪುಟ ಸಭೆಯೂ ಶಿಫಾರಸು ಮಾಡಿತ್ತು. ಆದರೆ ರಾಜ್ಯಪಾಲರು ಈವರೆಗೂ ಅದಕ್ಕೆ ಒಪ್ಪಿಗೆ ನೀಡಿಲ್ಲ. ಅಜರುದ್ದೀನ್ ಎಂಎಲ್​ಸಿ ಆಗಿ ಆಯ್ಕೆಯಾಗಲು ಅಥವಾ ನಾಮನಿರ್ದೇಶನಗೊಳ್ಳಲು ಆರು ತಿಂಗಳ ಗಡುವು ಏಪ್ರಿಲ್ 30ರಂದು ಮುಕ್ತಾಯಗೊಳ್ಳಲಿದೆ.
ಏ. 30ರೊಳಗೆ ಯಾವುದೇ ಸದನಕ್ಕೆ ಶಾಸಕರಾಗಿ ಆಯ್ಕೆಯಾಗದಿದ್ರೆ, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆದಾಗ್ಯೂ, ಸರ್ಕಾರಿ ವಲಯಗಳು, ರಾಜ್ಯಪಾಲರು ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಒಂದು ವೇಳೆ ರಾಜ್ಯಪಾಲರು ನಿಗದಿತ ಸಮಯದೊಳಗೆ ಆಯ್ಕೆ ಮಾಡಿದಿದ್ರೆ ಅಜರುದ್ದೀನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಒಂದೆರಡು ದಿನಗಳಲ್ಲಿ ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳ್ಳಬೇಕಾಗಬಹುದು. ಮತ್ತೆ ಅದು ಆರು ತಿಂಗಳು ಸಚಿವರಾಗಿ ಮುಂದುವರೆಯಲು ಅವಕಾಶ ನೀಡಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net