ಜೆನ್​-ಜೀ ಗಳು ನನ್ನನ್ನು ಒಪ್ಪಿಕೊಂಡಿದ್ದಾರೆ: ಇದೆಲ್ಲಾ ಮಹಾದೇವನ ಆರ್ಶೀವಾದ; ವೈರಲ್​ ಮೀಮ್ಸ್​​ಗಳಿಗೆ ರವಿ ಕಿಶನ್​ ಹೇಳಿದ್ದೇನು? Ravi Kishan on Memes

ವೈರಲ್ ಮಿಮ್ಸ್​ಗಳಿಗೆ ರವಿ ಕಿಶನ್​ ಪ್ರತಿಕ್ರಿಯೆ
ವೈರಲ್ ಮಿಮ್ಸ್​ಗಳಿಗೆ ರವಿ ಕಿಶನ್​ ಪ್ರತಿಕ್ರಿಯೆ
Published on

ಪ್ರಮುಖ ಮುಖ್ಯಾಂಶಗಳು

  • ಜೆನ್-ಜೀ (Gen-Z) ಯುವಕರು ನನ್ನನ್ನು ಒಪ್ಪಿಕೊಂಡಿದ್ದಾರೆ
  • ಇದೆಲ್ಲಾ ಮಹಾದೇವನ ಆಶೀರ್ವಾದ ಎಂದು ನಟ-ಸಂಸದ ರವಿ ಕಿಶನ್
  • ವೈರಲ್ ಮಿಮ್ಸ್​ಗಳಿಗೆ ರವಿ ಕಿಶನ್​ ಪ್ರತಿಕ್ರಿಯೆ
ನವದೆಹಲಿ: ಕಳೆದ ಕೆಲ ದಿನಗಳಿಂದ ಭೋಜಪುರಿ ನಟ, ಬಿಜೆಪಿ ಸಂಸದ ರವಿ ಕಿಶನ್​ ಅವರು ಎಲ್ಲರ ಮೊಬೈಲ್​ಗಳಲ್ಲಿ ಮಿಂಚುತ್ತಿದ್ದು, ಸೋಷಿಯಲ್​ ಮೀಡಿಯಾ ತೆರೆದರೆ ಸಾಕು ಇವರ ಕುರಿತಾದ ಮೀಮ್​ಗಳ ಸುರಿಮಳೆಯೇ ಹರಿಯುತ್ತಿದೆ. 

ಈಗ, ತಮ್ಮ ಮೀಮ್​ಗಳ ಕುರಿತು ಮಾತನಾಡಿರುವ ರವಿ ಕಿಶನ್ (Ravi Kishan on Memes)​ ಈ ಪೀಳಿಗೆಯ ಜೆನ್​-ಜೀ ಗಳಿಗೆ ನಾನು ಇಷ್ಟವಾಗಿದ್ದೆನೆ, ಇದು ನನಗೆ ತುಂಬಾ ಖುಷಿಯನ್ನು ತಂದುಕೊಟ್ಟಿದೆ ಎಂದಿದ್ದಾರೆ.

ನನ್ನನ್ನು ಅವರು ಒಪ್ಪಿಕೊಂಡಿದ್ದಾರೆ!

ಸದ್ಯ ಯಾರ ಸೋಷಿಯಲ್​ ಮೀಡಿಯಾ ಖಾತೆಗಳನ್ನು ತೆರೆದರೂ 'ಕೋಟೆಶ್ವರ', 'ಮನಿ ಫಾಲೋಸ್​ ಮೈ ಬ್ರದರ್​', 'ಜಲ್ದಿ ಸೇ ಲೇಟ್' ಈ ಮೀಮ್​ಗಳೇ ಕಾಣಿಸಿಕೊಳ್ಳುತ್ತಿವೆ. ಹೇಳಿ ಕೇಳಿ ಜೆನ್​​-ಜೀ ಗಳಿಗೆ ಈ ಮೀಮ್​ಗಳು ಬಹಳ ಇಷ್ಟವಾಗುವ ಕಾರಣ, ಈ ಮೀಮ್​ಗಳ ಕಥಾವಸ್ತುವಾಗಿರುವ ಸಂಸದ ರವಿ ಕಿಶನ್​ ಎಲ್ಲಡೆ ವೈರಲ್​ ಆಗುತ್ತಿದ್ದಾರೆ.

ತಮ್ಮ ಬಗ್ಗೆ ಮೀಮ್​ ಮಾಡುತ್ತಿರುವ ಹಾಗೂ ಅವು ವೈರಲ್​ ಆಗುತ್ತಿರುವುದಕ್ಕೆ ಪ್ರತಿಕ್ರಿಯಿ ನೀಡಿರುವ ರವಿ ಕಿಶನ್​, ಜೆನ್​-ಜೀ ಗಳಿಗೆ ನನ್ನ ಮುಕ್ತವಾದ ಮಾತು ಇಷ್ಟವಾಗಿದೆ. ನಾನು ಇದನ್ನು ನೋಡುತ್ತಿದ್ದು ನನಗೂ ಇದು ಬಹಳ ಹಿಡಿಸಿದೆ ಎಂದಿದ್ದಾರೆ. ಈಗ ಶ್ರಾವಣ ಮಾಸ ನಡೆಯುತ್ತಿದ್ದು, ಇದೆಲ್ಲಾ ಮಹಾದೇವನ ಆಶೀರ್ವಾದವಾಗಿದೆ ಎಂದಿದ್ದಾರೆ. 


ದಿಢೀರ್​ ಖ್ಯಾತಿಗೆ ಕುಟುಂಬ ಶಾಕ್​!


ತಾವು ಇತ್ತೀಚೆಗೆ ನೀಡಿದ್ದ ಸಂದರ್ಶನ, ಸಂಸತ್ತಿನಲ್ಲಿ ಮಾಧ್ಯಮದವರಿಗೆ ನೀಡಿದ ಹೇಳಿಕೆಗಳನ್ನು ಬಳಸಿಕೊಂಡು ಈ ಮೀಮ್​ಗಳನ್ನು ಮಾಡುತ್ತಿದ್ದಾರೆ. ನಾನು ನಟನಾಗಿ ಹಾಗೂ ರಾಜಕಾರಣಿಯಾಗಿ ಕನಿಷ್ಟ 30-35 ವರ್ಷ ಕಳೆದಿದ್ದೆನೆ,  ಆದರೆ ಈ ಮಟ್ಟಿಗಿನ ಖ್ಯಾತಿಯನ್ನು ನಾವು ನೋಡಿರಲಿಲ್ಲ.
ಈ ಡಢೀರ್ ಖ್ಯಾತಿಗೆ ನನ್ನ ಕುಟುಂಬ ವರ್ಗ ಕೂಡ ದಂಗಾಗಿದ್ದು, ನನ್ನ ಮೀಮ್​ಗಳನ್ನು ಬಿಜೆಪಿ ಮತ್ತು ದೆಹಲಿ ಪೊಲೀಸರು ಕೂಡ ಬಳಸಿಕೊಳ್ಳುತ್ತಿದ್ದಾರೆಂದ ರವಿ ಕಿಶನ್​ ಸಂತಸ ವ್ಯಕ್ತ ಪಡಿಸಿದ್ದಾರೆ. ಇದಕ್ಕೆಲ್ಲಾ ಮಹಾದೇವನ ಕೃಪೆ, ಅವನ ಮೇಲೆ ನನಗಿರುವ ಭಕ್ತಿಯೇ ಕಾರಣವೆಂದು ನಾನು ನಂಬುತ್ತೆನೆಂದು ರವಿ ಕಿಶನ್​ ತಿಳಿಸಿದ್ದಾರೆ, (ಏಜನ್ಸೀಸ್​). ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net