

ಪ್ರಮುಖ ಮುಖ್ಯಾಂಶಗಳು
ಸ್ವಾತಂತ್ರ್ಯ ಎಂದರೆ ಕೇವಲ ಯಾರೂ ತಡೆಯದಂತೆ ಇರುವ ಅಧಿಕಾರವಲ್ಲ, ಬದಲಾಗಿ ದೇಶದ ಬಗ್ಗೆ ಇರುವ ಜವಾಬ್ದಾರಿಯನ್ನು ಅರಿತುಕೊಳ್ಳುವುದು ನಿಜವಾದ ಸ್ವಾತಂತ್ರ್ಯ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (Ajit Doval on Freedom)
ದೇಶದ ಯುವಜನತೆಗೆ ಸಂದೇಶ ರವಾನಿಸಿದ್ದಾರೆ.
ಇಂದಿನ ಅನೇಕ ಯುವಕರು ಭಾರತ ಯಾವಾಗಲೂ ಹೀಗೆಯೇ ಇತ್ತು ಎಂದು ಭಾವಿಸಬಹುದು. ಸ್ವಾತಂತ್ರ್ಯವನ್ನು ಕೇವಲ ತಮ್ಮಿಷ್ಟದಂತೆ ಬದುಕು ನಡೆಸುವ ಸ್ವಾತಂತ್ರ್ಯ ಎಂದು ತಪ್ಪಾಗಿ ತಿಳಿದುಕೊಳ್ಳಬಹುದು. ಆದರೆ, ಸ್ವಾತಂತ್ರ್ಯದ ನಿಜವಾದ ಅರ್ಥ ಕೇವಲ ವೈಯಕ್ತಿಕ ಹಕ್ಕುಗಳಲ್ಲ, ಅದರ ಜತೆಗೆ ದೇಶದ ಕಡೆಗೆ ನಮಗಿರುವ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಕೂಡ ಸೇರಿವೆ ಎಂದು ದೋವಲ್ ಎಚ್ಚರಿಸಿದರು.