ಈ ನಿಯಮವನ್ನು ಕಲ್ಕತ್ತಾ ಹೈಕೋರ್ಟ್ ಕೂಡ ಎತ್ತಿಹಿಡಿದಿದ್ದು, ಗೋವು ಬಲಿ ಈದ್ ಹಬ್ಬದ ಕಡ್ಡಾಯ ಭಾಗವಲ್ಲ ಎಂಬ ಸುಪ್ರೀಂ ಕೋರ್ಟ್ನ ಹಳೆಯ ತೀರ್ಪನ್ನು ಉಲ್ಲೇಖಿಸಿದೆ. ಆದರೆ ಇದನ್ನು ಬಲವಾಗಿ ವಿರೋಧಿಸಿರುವ ಹುಮಾಯೂನ್ ಕಬೀರ್, ನಿಯಮಗಳು ಏನೇ ಇದ್ದರೂ ಧಾರ್ಮಿಕ ಸಂಪ್ರದಾಯದ ಪ್ರಕಾರ ಕುರ್ಬಾನಿ ಯಾವುದೇ ಬೆಲೆ ತೆತ್ತಾದರೂ ನಡೆದೇ ತೀರುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಬೆಂಕಿಯೊಂದಿಗೆ ಆಟವಾಡಬೇಡಿ ಎಂದು ಸುವೇಂದು ಅಧಿಕಾರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ಜನರ ವೈಯಕ್ತಿಕ ಆಹಾರದ ಹಕ್ಕಿನಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ, ಆದರೆ ಬಹಿರಂಗ ಗೋಹತ್ಯೆ ಮತ್ತು ಅಕ್ರಮ ಕಸಾಯಿಖಾನೆಗಳನ್ನು ಯಾವುದೇ ಕಾರಣಕ್ಕೂ ಜಾರಿಗೆ ಬರಲು ಬಿಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.