ಬಿಜೆಡಿಯ ನವೀನ್ ಪಟ್ನಾಯಕ್, ವೈಎಸ್‌ಆರ್‌ಸಿಪಿಯ ಜಗನ್ ರೆಡ್ಡಿ ಮತ್ತು ಬಿಆರ್‌ಎಸ್‌ನ ಕೆ. ಚಂದ್ರಶೇಖರ್ ರಾವ್ ಪಕ್ಷಗಳ ಮಾದರಿಯಲ್ಲೇ, ಡಿಎಂಕೆಯೂ ಎನ್‌ಡಿಎ ಮೈತ್ರಿಕೂಟದ ಹೊರಗಿದ್ದುಕೊಂಡೇ ಕೇಂದ್ರ ಸರ್ಕಾರಕ್ಕೆ ವಿಷಯಾಧಾರಿತ ಬೆಂಬಲ ನೀಡಲಿ ಎಂಬುದು ಬಿಜೆಪಿಯ ಆಶಯವಾಗಿದೆ. ಮತ್ತೊಂದೆಡೆ, ಚುನಾವಣಾ ಸೋಲಿನ ಬಳಿಕ ಬಿಜೆಪಿಯ ತಮಿಳುನಾಡು ಮಿತ್ರಪಕ್ಷವಾದ ಎಐಎಡಿಎಂಕೆಯಲ್ಲಿ ಆಂತರಿಕ ಬಂಡಾಯ ಶುರುವಾಗಿದ್ದು, ಪಕ್ಷವು ಒಡೆಯುವ ಸಾಧ್ಯತೆಯೇ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಎಐಎಡಿಎಂಕೆಯ ಎರಡೂ ಬಣಗಳು ತಮ್ಮ ರಾಜಕೀಯ ಉಳಿವಿಗಾಗಿ ಕೇಂದ್ರದ ಬೆಂಬಲವನ್ನು ಯಾಚಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ, ಸ್ಟಾಲಿನ್ ನೇತೃತ್ವದ ಡಿಎಂಕೆ ಸ್ವಲ್ಪ ಆಸಕ್ತಿ ತೋರಿಸಿದರೂ ಸಾಕು, ತಮಿಳುನಾಡಿನಲ್ಲಿ ಅದರ ಕಡೆಗೆ ಹೆಜ್ಜೆ ಇಡಲು ಬಿಜೆಪಿಗೆ ಯಾವುದೇ ರಾಜಕೀಯ ಮುಜುಗರ ಇರುವುದಿಲ್ಲ.