ಜಮ್ಮು-ಕಾಶ್ಮೀರದ ಎನ್ಸಿ ಸರ್ಕಾರದಲ್ಲಿ ಬಿಕ್ಕಟ್ಟು; 3ನೇ ತಾರೀಖು ಶಾಸಕಾಂಗ ಸಭೆ ಸಿಎಂ ಓಮರ್ ಅಬ್ದುಲ್ಲಾ | CM Omar Abdullah
ಸಿಎಂ ಓಮರ್ ಅಬ್ದುಲ್ಲಾ
Published on:
Copied
Follow Us
ಶ್ರೀನಗರ: ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರದಲ್ಲಿ ಬಿಕ್ಕಟ್ಟು ಎದುರಾಗಿದ್ದು, ಹಲವು ಶಾಸಕರು ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದಾರೆ ಎನ್ನಲಾಗಿದ್ದು, ಈ ಕುರಿತು ಚರ್ಚಿಸಲು 3ನೇ ತಾರೀಖು ಸಿಎಂ ಓಮರ್ ಅಬ್ದುಲ್ಲಾ(CM Omar Abdullah) ತುರ್ತು ಶಾಸಕಾಂಗ ಸಭೆ ಕರೆದಿದ್ದಾರೆ.
90 ಸ್ಥಾನಗಳಿರುವ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬರಲು 46 ಸ್ಥಾನಗಳು ಬೇಕು. 2024ರ ವಿಧಾನಸಭಾ ಚುನಾವಣೆಯಲ್ಲಿ ಒಮರ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದಿತ್ತು. ಎನ್ಸಿ 42 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 6 ಸ್ಥಾನಗಳನಲ್ಲಿ ಗೆದ್ದಿತ್ತು. ಒಟ್ಟು 48 ಶಾಸಕರ ಬೆಂಬಲದೊಂದಿಗೆ ಓಮರ್ ಸಿಎಂ ಆಗಿದ್ದರು.
ಪ್ರಸ್ತುತ ಸರ್ಕಾರದ ಬಗ್ಗೆ ಅವರ ಸ್ವಂತ ಎನ್ಸಿ ಶಾಸಕರೇ ಅಸಮಾನಧಾನ ಹೊಂದಿದ್ದಾರೆ ಎನ್ನಲಾಗಿದ್ದು, ಅನೇಕರು ಒಮರ್ ನಾಯಕತ್ವವನ್ನು ಟೀಕಿಸುತ್ತಿದ್ದಾರೆ. ಏತನ್ಮಧ್ಯೆ ಅನೇಕ ಆಡಳಿತ ಪಕ್ಷದ ಶಾಸಕರು ಸರ್ಕಾರದ ವಿರುದ್ಧ ಅಸಂತೃಪ್ತಿಯಾಗಿದ್ದಾರೆ. ಮತ್ತು ಪಕ್ಷ ಬಿಡಲು ಯತ್ನಿಸುತ್ತಿದ್ದಾರೆ ಎಂದು ವಿಪಕ್ಷ ಬಿಜೆಪಿ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಈ ಹಿನ್ನೆಲೆ ಪಕ್ಷದ ಶಾಸಕರನ್ನು ಸಮಾಧಾನಪಡಿಸಲು ಒಮರ್ ಅಬ್ದುಲ್ಲಾ ಅವರು ಜೂನ್ 3 ರಂದು ತುರ್ತು ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ, ಮುಳುಗುತ್ತಿರುವ ಹಡಗನ್ನು ಉಳಿಸುವ ಕೊನೆಯ ಪ್ರಯತ್ನವಾಗಿ ಒಮರ್ ಈ ಸಭೆಯನ್ನು ಕರೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ (ಏಜೆನ್ಸೀಸ್).