ಬೆದರಿಕೆ ಮತ್ತು ಬಂಧನಗಳ ಮೂಲಕ ಟಿಎಂಸಿ ಕಾರ್ಯಕರ್ತರನ್ನು ದುರ್ಬಲಗೊಳಿಸಲು ಬಿಜೆಪಿಗೆ ಪೊಲೀಸರು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ನಮಗೆ ಧರಣಿ ನಡೆಸಲು ಅನುಮತಿ ನೀಡುತ್ತಿಲ್ಲ. ರಸ್ತೆ ಹೆಚ್ಚಾಗಿ ಸ್ಪಷ್ಟವಾಗಿದೆ. ಇದು ಕೇವಲ 100 ಜನರ ಪ್ರತಿಭಟನೆಯಾಗಿದೆ. ನಾವು ಪೊಲೀಸರಿಗೆ ಪತ್ರ ಸಲ್ಲಿಸಿದ್ದೇವೆ. ಪೊಲೀಸರು ಅನುಮತಿ ನೀಡದಿದ್ರೆ ದೆಹಲಿಗೆ ಹೋಗಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತೇನೆ ಎಂದು ಗುಡುಗಿದ್ದಾರೆ.