ಪ್ರತಿಭಟನೆ ಬಿಟ್ಟು ಬರ್ಗರ್ ತಿಂದ CJP ವಕ್ತಾರ: ವಿಜೇತಾ ದಹಿಯಾನನ್ನು ಪಕ್ಷದಿಂದ ಉಚ್ಚಾಟಿಸಿದ ಕಾಕ್ರೋಚ್​ ಜನತಾ ಪಾರ್ಟಿ! Vijeta Dahiya

NEET ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಲಾಠಿ ಏಟು ತಿನ್ನುತ್ತಿದ್ದರೆ ಬರ್ಗರ್ ತಿನ್ನುತ್ತಿದ್ದ ಸಿಜೆಪಿ ವಕ್ತಾರ ವಿಜೇತಾ ದಹಿಯಾ!
NEET ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಲಾಠಿ ಏಟು ತಿನ್ನುತ್ತಿದ್ದರೆ ಬರ್ಗರ್ ತಿನ್ನುತ್ತಿದ್ದ ಸಿಜೆಪಿ ವಕ್ತಾರ ವಿಜೇತಾ ದಹಿಯಾ!
Published on

ಪ್ರಮುಖ ಮುಖ್ಯಾಂಶಗಳು

  • NEET ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಲಾಠಿ ಏಟು ತಿನ್ನುತ್ತಿದ್ದರೆ ಬರ್ಗರ್ ತಿನ್ನುತ್ತಿದ್ದ ಸಿಜೆಪಿ ವಕ್ತಾರ ವಿಜೇತಾ ದಹಿಯಾ!
  • ವಿಡಿಯೋ ವೈರಲ್ ಬೆನ್ನಲ್ಲೇ ಪಕ್ಷದಿಂದ ಉಚ್ಚಾಟನೆ ಮಾಡಿದ ಕಾಕ್ರೋಚ್ ಜನತಾ ಪಾರ್ಟಿ
ನವದೆಹಲಿ: ನೀಟ್​ ಸೇರಿದಂತೆ ದೇಶದಲ್ಲಿ ನಡೆಯುತ್ತಿರಯವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ಸೋಮವಾರ (ಜು.20) ದೆಹಲಿಯಲ್ಲಿ ಬೃಹತ್​ ಪ್ರತಿಭಟನಾ ರ‍್ಯಾಲಿ ನಡೆಸಲಾಗಿತ್ತು.
ಆದರೆ ಈ ಪ್ರತಿಭಟನೆಯಲ್ಲಿ ಸಿಜೆಪಿಯ ವಕ್ತಾರನಾದ ವಿಜೇತಾ ದಹಿಯಾ (Vijeta Dahiya) ಪ್ರತಿಭಟನೆಯಲ್ಲಿ ಭಾಗವಹಿಸದೆ, ಹೋಟೆಲ್​ವೊಂದರಲ್ಲಿ ಬರ್ಗರ್​ ತಿನ್ನುತ್ತಿದ್ದ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗಿತ್ತು. ಈ ವಿಡಿಯೋ ಎಲ್ಲಡೆ ಹಂಚಿಕೆ ಆಗುತ್ತಿದ್ದಂತೆ, ಎಚ್ಚೆತ್ತಿರುವ ಕಾಕ್ರೋಚ್​ ಜನತಾ ಪಾರ್ಟಿ ವಿಜೇತಾ ದಹಿಯಾನನ್ನು ತಮ್ಮ ಪಕ್ಷದ ವಕ್ತಾರ ಹುದ್ದೆಯಿಂದ ಕೆಳಗಿಳಿಸಿದೆ.

ಇದನ್ನು ಸಹಿಸಲು ಸಾಧ್ಯವಿಲ್ಲ!

ವಿಜೇತ ದಹಿಯಾನನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ಕುರಿತು ಖುದ್ದು ಕಾಕ್ರೋಚ್​ ಪಕ್ಷ ತನ್ನ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ನಮ್ಮ ಪಕ್ಷವನ್ನು ನಂಬಿಬಂದ ವಿದ್ಯಾರ್ಥಿಗಳು ಲಾಠ ಏಟನ್ನು ತಿನ್ನುತ್ತಿದ್ದಾಗ, ನಮ್ಮ ಪಕ್ಷದ ವಕ್ತಾರ ಈ ಪ್ರತಿಭಟನೆಯಿಂದ ಹೊರಗಿರುವ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ವಿಜೇತಾ ದಹಿಯ ಅವರ ಈ ವರ್ತನೆಯನ್ನು ಪಕ್ಷ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಹೀಗಾಗಿ ಅವರನ್ನು ಪಕ್ಷದ ವಕ್ತಾರ ಸ್ಥಾನದಿಂದ ತೆಗೆದುಹಾಕುತ್ತಿದ್ದವೆ ಎಂದು ಬರೆದುಕೊಂಡಿದ್ದಾರೆ.

ಪ್ರತಿಭಟನೆಗೆ ನಾನು ಜವಾಬ್ದಾರನಲ್ಲ!

ನಿನ್ನೆ ನಡೆದ ಹೋರಟದಲ್ಲಿ ಪಕ್ಷದ ವಕ್ತಾರರಾಗಿ ಏಕೆ ಭಾಗವಹಿಸಿಲ್ಲ ಎಂದು ವಿಜೇತಾ ದಹಿಯಾ ಅವರಿಗೆ ಪ್ರಶ್ನೆಗಳ ಸುರಿಮಳೆ ಸುರಿದಿದೆ. ಇದಕ್ಕೆ ಮೊಂಡು ಉತ್ತರ ಕೊಟ್ಟಿರುವ ದಹಿಯಾ, ಈ ಹೋರಾಟಕ್ಕೆ ನಾನು ಜವಾಬ್ದಾರನಲ್ಲ, ನನ್ನನ್ನು ಪ್ರಶ್ನಿಸುವಂತೆ ಧಮೇಂದ್ರ ಪ್ರಧಾನ್​ರನ್ನು ಪ್ರಶ್ನಿಸಿ ಎಂದಿದ್ದಾರೆ.
ನೀವು ಕೇಳುವ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ, ನಿವೇನು ನನಗೆ ಮತವನ್ನು ನೀಡಿ ಆಯ್ಕೆಮಾಡಿಲ್ಲ, ಆದ್ದರಿಂದ ನಿಮಗೆ ನಾನು ಉತ್ತರ ನೀಡಲೇ ಬೇಕೆಂಬ ಉತ್ತರದಾಯಿತ್ವ ನನ್ನದಲ್ಲ ಎಂದು ದಹಿಯಾ ಹೇಳಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net