ದೇಶಿ ರೋಬೋಟ್ ಹೆಸರಲ್ಲಿ ಚೀನಾ ನಾಯಿ ಪ್ರದರ್ಶನ? ಗಲ್ಗೋಟಿಯಾಸ್ ವಿವಿಗೆ AI ಸಮಿಟ್‌ನಿಂದ ಗೇಟ್ ಪಾಸ್ | AI Summit

ಭಾರತ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಚೀನಾ ನಿರ್ಮಿತ ರೋಬೋಟಿಕ್​ ನಾಯಿ
ಭಾರತ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಚೀನಾ ನಿರ್ಮಿತ ರೋಬೋಟಿಕ್​ ನಾಯಿ
Published on

ಪ್ರಮುಖ ಮುಖ್ಯಾಂಶಗಳು

  • ದೇಶಿ ತಂತ್ತ್ರಜ್ಞಾನದ ಹೆಸರಿನಲ್ಲಿ ಚೀನಾ ನಿರ್ಮಿತ ರೋಬೋ ಪ್ರದರ್ಶನ
  • ಸುಳ್ಳು ಮಾಹಿತಿ ನೀಡಿದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಶೃಂಗಸಭೆಯಿಂದ ಗೇಟ್​ಪಾಸ್​
  • ದೆಹಲಿಯಲ್ಲಿ ನಡೆಯುತ್ತಿರುವ ಕೃತಕ ಬುದ್ದಿಮತ್ತೆ ಶೃಂಗಸಭೆ
ನವದೆಹಲಿ: ಚೀನಾ ನಿರ್ಮಿತ ರೋಬೊಟ್​ನ್ನು ಪ್ರದರ್ಶಿಸಿದ ಹಿನ್ನಲೆ, ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ದೆಹಲಿಯಲ್ಲಿ ನಡೆಯುತ್ತಿರುವ ಕೃತಕ ಬುದ್ದಿಮತ್ತೆ ಶೃಂಗಸಭೆ (AI Summit) ಯಿಂದ ಹೊರನಡೆಯಲು ಆದೇಶ ನೀಡಲಾಗಿದೆ ಎಂದು ವರದಿಯಾಗಿದೆ.
ಈ ರೋಬೋಟಿಕ್ ನಾಯಿಯನ್ನು ತಮ್ಮ ವಿಶ್ವವಿದ್ಯಾಲಯಲ್ಲಿಯೇ ನಿರ್ಮಿಸಿದ್ದೇವೆ ಮತ್ತು ಈ ರೊಬೊಟ್​ನ್ನು ನಮ್ಮ ವಿಶ್ವವಿದ್ಯಾಲಯದ ಮಕ್ಕಳು ಕಲಿಕೆಯ ಭಾಗವಾಗಿ ಬಳಕೆ ಮಾಡುತ್ತಾರೆ ಎಂದು ಗಲ್ಗೋಟಿಯಾಸ್ ವಿವಿಯ ಅಧ್ಯಾಪಕರೊಬ್ಬರು ಎಐ ಎಕ್ಸ್​ಫೋ ನಲ್ಲಿ ಹೇಳಿದ್ದರು.
ಆದರೆ ಈ ರೋಬೋಟಿಕ್ ನಾಯಿ ಮೂಲತಃ ಚೀನಾ ನಿರ್ಮಿತವಾಗಿದ್ದು, ಇದನ್ನು ಆನ್​ಲೈನ್​ನಲ್ಲಿ 2-3 ಲಕ್ಷ ರೂಪಾಯಿಗೆ ಖರೀದಿ ಮಾಡಲು ಸಾಧ್ಯ ಎಂದು ತಿಳಿದ ನಂತರ ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಎಐ ಶೃಂಗಸಭೆಯಿಂದ ಹೊರಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ವಿಡಿಯೋ ವೈರಲ್​

ದೆಹಲಿಯಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದವು ಮತ್ತಷ್ಟು ತೀವ್ರಗೊಂಡಿತು. ಓರಿಯನ್ ಎಂಬ ಹೆಸರಿನ, ಯುನಿಟ್ರೀ ಗೋ2 ರೋಬೋಟಿಕ್ ನಾಯಿಯನ್ನು, ಸ್ಥಳೀಯವಾಗಿಯೇ ನಿರ್ಮಿಸಿದ್ದೇವೆ ಮತ್ತು ಇದು ಮಕ್ಕಳ ಕಲಿಕೆಗೆ ಸಹಾಯ ಮಾಡುತ್ತಿದೆ ಎಂದು ಗಲ್ಗೋಟಿಯಾಸ್ ವಿವಿಯ ಅಧ್ಯಾಪಕರೊಬ್ಬರು ಹೇಳಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲಾಯಿತು.
ಆದರೆ ಇವರು ನೀಡಿದ ಹೇಳಿಕೆ ಸಂಪೂರ್ಣ ಸುಳ್ಳಾಗಿದ್ದು, ಈ ರೋಬೋಟಿಕ್ ನಾಯಿಯನ್ನು ಚೀನಾ ದೇಶದ ಕಂಪನಿಯೊಂದು ನಿರ್ಮಿಸಿದ್ದು, ಇದನ್ನು ಆನ್​ಲೈನ್​ನಲ್ಲಿ ಖರೀದಿಸಲಾಗಿದೆ ಮತ್ತು ದೇಶೀಯ ತಂತ್ರಜ್ಞಾನವೆಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತು.

ವಿಶ್ವವಿದ್ಯಾಲಯದ ಸಮರ್ಥನೆ ಏನು?

ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯ, ನಾನು ಈ ರೋಬೋಟ್​ನ್ನು ನಿರ್ಮಿಸಿದ್ದಾಗಿ ಹೇಳಿಲ್ಲ, ಇದನ್ನು ನಾವು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸುತ್ತಿದ್ದೆವೆ ಎಂದು ಮಾತ್ರ ಹೇಳಿದ್ದೆವೆ ಎಂದು ಸಮರ್ಥನೆಯನ್ನು ನೀಡಿದೆ.
ನಮ್ಮ ಮೇಲೆ ದುರುದ್ದೇಶ ಇಟ್ಟುಕೊಂಡಿರುವವರು ಸುಳ್ಳಿನಿಂದ ಕೂಡಿದ ವಿಡಿಯೋವನ್ನು ವೈರಲ್​ ಮಾಡುತ್ತಿದ್ದಾರೆ, ನಾವು ಎಂದಿಗೂ ರೋಬೋಟ್​ ನಾಯಿಯನ್ನು ನಾವೇ ತಯಾರಿಸಿದ್ದೇವೆ ಮತ್ತು ಇದು ನಮ್ಮ ಸ್ವಂತ ತಂತ್ರಜ್ಞಾನವೆಂದು ಎಂದಿಗೂ ಹೇಳಿಲ್ಲ ಎಂದು ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯ ಎಕ್ಸ್​(ಟ್ವಿಟರ್​) ನಲ್ಲಿ ತಿಳಿಸಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net