ಶೀಘ್ರವೇ ಬೆಳ್ಳಿ 4 ಲಕ್ಷ ರೂ. ಗಡಿದಾಟಿದರೂ ಅಚ್ಚರಿಯಿಲ್ಲ! ನಿಲ್ಲದ ಏರಿಕೆಯ ಓಟ! ಹೀಗಿದೆ ಇಂದಿನ ದರ | Gold Rates

ಚಿನ್ನ-ಬೆಳ್ಳಿ ದರ
ಚಿನ್ನ-ಬೆಳ್ಳಿ ದರ
Published on

ಪ್ರಮುಖ ಮುಖ್ಯಾಂಶಗಳು

  • ಬೆಳ್ಳಿ-ಚಿನ್ನ ಬೆಲೆಗಳಲ್ಲಿ ನಿಲ್ಲದ ಏರಿಕೆ
  • ದಿನ ಕಳೆದಂತೆ ದಾಖಲೆಯ ಮಟ್ಟಕ್ಕೆ ಏರುತ್ತಿವೆ ಬೆಲೆಗಳು
  • ಪ್ರತಿ ಕೆಜಿ ಬೆಳ್ಳಿ ಬೆಲೆ ಶೀಘ್ರವೇ 4 ಲಕ್ಷ ರೂ. ದಾಟಿದ್ರೂ ಅಚ್ಚರಿಯಿಲ್ಲ
  • ಹೀಗಿದೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ
ನವದೆಹಲಿ: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹಿಂದೆಂದೂ ಕಾಣದಷ್ಟು ಏರಿಕೆ ಆಗುತ್ತಿರುವುದು ಸದ್ಯ 'ಚಿನ್ನ'ದಂತ ಗ್ರಾಹಕರನ್ನು ಅಕ್ಷರಶಃ ಕಂಗಾಲಾಗಿಸಿದೆ. ಕಳೆದ ವರ್ಷ ದಾಖಲೆ ಬರೆದ ಬೆಲೆಗಳು 2026ರಲ್ಲಿಯೂ ಅದನ್ನು ಮುಂದುವರಿಸುತ್ತಿವೆ. ಇತ್ತೀಚೆಗೆ, ಬೆಳ್ಳಿಯ ಬೆಲೆ ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ಪ್ರತಿ ಕೆಜಿಗೆ 3 ಲಕ್ಷ ರೂ. ಗಡಿದಾಟಿ ಮುಂದೋಗಿದೆ. ಈ ದರವು ಶೀಘ್ರವೇ 4 ಲಕ್ಷ ರೂ. ದಾಟಿದ್ರೂ ಅಚ್ಚರಿಯಿಲ್ಲ ಎಂಬುದಕ್ಕೆ ಇಂದಿನ ದರ ಏರಿಕೆಯ ಬಲವಾದ ಕಾರಣ.

10 ಗ್ರಾಂ ಚಿನ್ನದ ಬೆಲೆ 1,040 ರೂ. ಏರಿಕೆ

ಚಿನ್ನದ ಪರಿಸ್ಥಿತಿಯೂ ಅದೇ ರೀತಿ ಇದೆ. ಗೋಲ್ಡ್​ ದರವೂ ಗಗನಕ್ಕೇರುತ್ತಿದೆ. ಇಂದು, 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 1,040 ರೂ. ಹೆಚ್ಚಾಗಿದ್ದರೆ, ಒಂದು ಕೆಜಿ ಬೆಳ್ಳಿಯ ಬೆಲೆ ಇಂದೂ ಸಹ 10,000 ರೂ. ಏರಿಕೆಯಾಗಿದೆ. ಇದರೊಂದಿಗೆ, ದೆಹಲಿ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಲೆ 3,15,000 ರೂ.ಗೆ ತಲುಪಿದೆ. ಗೋಲ್ಡ್​-ಸಿಲ್ವರ್​ ದರಗಳು ಈ ಮಟ್ಟಿಗೆ ಏರಿಕೆಯಾದರೆ, ಜನಸಾಮಾನ್ಯರು ಖರೀದಿಸುವುದಾದರೂ ಹೇಗೆ? ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ಬಿಟ್ಟು ಆರ್ಟಿಫಿಶಿಯಲ್​ ಗೋಲ್ಡ್​ ಕೊಳ್ಳಬೇಕಷ್ಟೇ.

ಚಿನ್ನದ ಬೆಲೆಯಲ್ಲಿ ಇಂದಿನ ಏರಿಕೆಯೆಷ್ಟು?

ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 1,040 ರೂ. ಏರಿಕೆಯಾಗಿ, 1,47,280 ರೂ.ಗೆ ತಲುಪಿದೆ. ಅದೇ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 950 ರೂ. ಹೆಚ್ಚಾಗಿದ್ದು, 1,35,000 ರೂ.ಗೆ ತಲುಪಿದೆ. ಇನ್ನು 18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 780 ರೂ. ಏರಿಕೆಯಾಗಿ, 1,10,460 ರೂ.ನಲ್ಲಿ ವಹಿವಾಟು ನಡೆಸುತ್ತಿದೆ.

ಬೆಳ್ಳಿ 10,000 ಏರಿಕೆ

  • ರಾಜಧಾನಿ ದೆಹಲಿ, ಬೆಂಗಳೂರು, ಮುಂಬೈ ಮತ್ತು ಕೋಲ್ಕತ ನಗರಗಳಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆಯು 3,15,000 ರೂ. ಆಗಿದೆ.
  • ಚೆನ್ನೈ, ಆಂಧ್ರಪ್ರದೇಶ, ತೆಲಂಗಾಣ ನಗರಗಳಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆಯೂ 3,30,000 ರೂ.ಗೆ ತಲುಪಿದೆ,(ಏಜೆನ್ಸೀಸ್).
ಗಮನಿಸಿ: ಮೇಲೆ ತಿಳಿಸಲಾದ ದರಗಳು ಬೆಳಗಿನ ಮಾರುಕಟ್ಟೆಯ ವಿವರ ಆಧರಿಸಿ. ಈ ದರಗಳು ಮಧ್ಯಾಹ್ನದ ನಂತರ ಸಾಕಷ್ಟು ಬದಲಾವಣೆಗೆ ಒಳಪಟ್ಟಿರುತ್ತವೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net