ತೆಲುಗು ಮತ್ತು ತಮಿಳು ಸೇರಿದಂತೆ ಬಾಲಿವುಡ್ನ ಹಲವು ಸಿನಿಮಾಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ, ಬ್ಲಾಕ್ಬಸ್ಟರ್ ಹಿಟ್ಗಳನ್ನೇ ನೋಡುತ್ತಿರುವುದು ಗಮನಾರ್ಹ. ಕಳೆದ ವರ್ಷ, 'ಕುಬೇರ', 'ಸಿಕಂದರ್', 'ಚಾವಾ' ಮತ್ತು 'ದಿ ಗರ್ಲ್ಫ್ರೆಂಡ್' ಚಿತ್ರಗಳಲ್ಲಿ ಅಭಿನಯಿಸಿದ ರಶ್ಮಿಕಾ, 'ಪುಷ್ಪ 2', 'ಅನಿಮಲ್' ಸಿನಿಮಾಗಳ ಹಿಟ್ನಿಂದ ತಮ್ಮ ವೃತ್ತಿಜೀವನದಲ್ಲಿ ಅತಿದೊಡ್ಡ ಯಶಸ್ಸು ಕಂಡರು. ಆದರೆ, ಒಂದಷ್ಟು ಚಿತ್ರಗಳ ಫ್ಲಾಪ್ ಸಾಲಿಗೆ ಸೇರಿದ್ದು, ಅದರಲ್ಲಿ ಸಿಕಂದರ್ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿತು. ಇದು ಚಿತ್ರತಂಡಕ್ಕೆ ದೊಡ್ಡ ಮಟ್ಟದ ನಷ್ಟ ತಂದೊಡ್ಡಿತು.