ಕಾಠಿಪರಾ ಫ್ಲೈಓವರ್‌ನಲ್ಲಿ ಕಾರು ಡಿಕ್ಕಿ; ಎ.ಆರ್. ರೆಹಮಾನ್ ಪುತ್ರ ಅಮೀನ್‌ಗೆ ಗಾಯ, ಆಸ್ಪತ್ರೆಗೆ ದಾಖಲು| A R Rehman son Ameen

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪುತ್ರ ಅಮೀನ್‌ ಕಾರು ಅಫಘಾತ
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪುತ್ರ ಅಮೀನ್‌ ಕಾರು ಅಫಘಾತ
Published on

ಪ್ರಮುಖ ಮುಖ್ಯಾಂಶಗಳು

  • ಕಾಠಿಪರಾ ಫ್ಲೈಓವರ್‌ನಲ್ಲಿ ಸಂಭವಿಸಿದ ಕಾರು ಅಪಘಾತ
  • ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪುತ್ರ ಅಮೀನ್‌ಗೆ ಗಾಯ
  • ರೆಹಮಾನ್ ಪುತ್ರ ಅಮೀನ್ ಕಾರು ಜಖಂ. ಆಸ್ಪತ್ರೆಗೆ ದಾಖಲು
ಚೆನ್ನೈ: ಸೋಮವಾರ (ಆ.10) ಗಿಂಡಿಯಲ್ಲಿರುವ ಕಾಠಿಪರಾ ಫ್ಲೈಓವರ್​ನಲ್ಲಿ ಅಫಘಾತ ಸಂಭವಿಸಿದ್ದು, ಈ ಅಫಘಾತದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಪುತ್ರ ಎ.ಆರ್​. ಅಮೀನ್ (

A R Rehman son Ameen

)​ ಗಾಯಗೊಂಡಿದ್ದಾರೆಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ವಿರುದ್ಧ ದಿಕ್ಕಿನಲ್ಲಿ ಬಂದತಹ ವಾಹನಕ್ಕೆ ಅಮೀನ್​ ಅವರ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಆದರೆ, ಅದೃಷ್ಟವಶಾತ್​ ರೆಹಮಾನ್​ ಪುತ್ರ ಅಮೀನ್​ಗೆ ಚಿಕ್ಕ-ಪುಟ್ಟ ಗಾಯಗಳಾಗಿದ್ದು, ಪ್ರಾಣಕ್ಕೇನು ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ.

ಆಸ್ಪತ್ರೆಗೆ ದಾಖಲು; ಚಿಂತೆ ಇಲ್ಲ!

ಈ ಘಟನೆಯು ಕಾಠಿಪರಾ ಫ್ಲೈಓವರ್​ನಲ್ಲಿ ನಡೆದಿದ್ದು, ಎದುರಿಗೆ ಬಂದ ವ್ಯಗನ್​-ಆರ್​ ಕಾರಿಗೆ ಅಮೀನ್ ಅವರ ಕಾರು ಡಿಕ್ಕಿಯಾಗಿದೆ. ಸದ್ಯ ಎರಡು ಕಾರಿನಲ್ಲಿದ್ದ ಜನರನ್ನು ಕಲೈನಾರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.

ಎರಡೂ ಪಕ್ಷದವರಿಗೆ ಹೆಚ್ಚಿನ ಗಾಯಗಳೇನು ಆಗದ ಹಿನ್ನಲೆ, ಆಸ್ಪತ್ರೆಯಿಂದ ಡಿಸಾರ್ಜ್​ ಮಾಡಲಾಗಿದೆ ಎಂದು ತಿಳಿದಿದೆ. ಸದ್ಯ ಉಭಯ ವಾಹನ ಮಾಲೀಕರು ಅಡ್ಯಾರ್​ ಟ್ರಾಫಿಕ್​ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಅದರೆ ಈ ಘಟನೆ ಬಗ್ಗೆ ಅಮೀನ್​ ಆಗಲೀ ಅಥವಾ ಎ.ಆರ್​. ರೆಹಮಾನ್​ನಿಂದ ಇಲ್ಲಿವರೆಗೆ ಯಾವುದೇ ಹೇಳಿಕೆಗಳು ಹೊರಬಂದಿಲ್ಲ,

(ಏಜನ್ಸೀಸ್​). ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net