ಇದು ಆಧುನಿಕ ಜಗತ್ತು, ಕೃಷಿ ಕ್ಷೇತ್ರದಲ್ಲಿಯೂ ದಿನದಿಂದದಿನಕ್ಕೆ ನಾನಾ ರೀತಿಯಲ್ಲಿ ಹೊಸ ಹೊಸ ಪರಿಕರ, ಬೆಳೆಯುವ ವಿಧಾನಗಳು ಬದಲಾಗುತ್ತಿದೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ರೈತ ರಮಣ ರೆಡ್ಡಿ, ಕೃಷಿ ವಿಜ್ಞಾನಿಗಳು ಹಾಗೂ ತನ್ನ ಮಿತ್ರರು ಬೇಡ ಈ ಕೆಲಸ ಆಗಲ್ಲ ಎನ್ನುವುದನ್ನು ವಿರೋಧಿಸಿ ಸೇಬು ಬೆಳೆದು, ಆಂಧ್ರದಲ್ಲಿ ಸಾಕಷ್ಟು ಲಾಭ ಗಳಿಸುತ್ತಿದ್ದಾರೆ.