ಪ್ರಿಯಾಂಕಾ ಮಾತಿಗೆ ಅಮಿತ್​ ಶಾ ಮಂದಹಾಸ: ನನ್ನ ಕೈಲಾಗದ ಕೆಲಸವನ್ನು ನನ್ನ ತಂಗಿ ಮಾಡಿದ್ದಾಳೆ: ರಾಹುಲ್​ ಶ್ಲಾಘನೆ! Rahul Gandhi on Priyanka Gandhi

ನಾನು ಮಾಡಲಾಗಿದ್ದನ್ನು ನನ್ನ ತಂಗಿ ಮಾಡಿದ್ದಾಳೆ ಎಂದ ರಾಹುಲ್​ ಗಾಂಧಿ
ನಾನು ಮಾಡಲಾಗಿದ್ದನ್ನು ನನ್ನ ತಂಗಿ ಮಾಡಿದ್ದಾಳೆ ಎಂದ ರಾಹುಲ್​ ಗಾಂಧಿ
Published on

ಪ್ರಮುಖ ಮುಖ್ಯಾಂಶಗಳು

  • ಸಂಸತ್ತಿನಲ್ಲಿ ಮಹಿಳಾ ಮೀಸಲಾಗಿ ಬಗ್ಗೆ ಚರ್ಚೆ
  • ನಿನ್ನೆ ಪ್ರಿಯಾಂಕಾ ಗಾಂಧಿ ಮಾತಿಗೆ ನಕ್ಕಿದ್ದ ಅಮಿತ್​ ಶಾ
  • ನಾನು ಮಾಡಲಾಗಿದ್ದನ್ನು ನನ್ನ ತಂಗಿ ಮಾಡಿದ್ದಾಳೆ ಎಂದ ರಾಹುಲ್​ ಗಾಂಧಿ
ನವದೆಹಲಿ: ಶುಕ್ರವಾರ (ಏ.17) ಎನ್​ಡಿಎ ನೇತೃತ್ವದ ಕೇಂದ್ರ ಸರ್ಕಾರ ಭಾರತದಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ಶೇ. 33 ರಷ್ಟು ಮೀಸಲಾತಿನ್ನು ನೀಡುವ ಮಸೂದೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಿತು.
ಈ ಚರ್ಚೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ (Rahul Gandhi on Priyanka Gandhi), ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುವ ಜೊತೆಗೆ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ಹೊಗಳಿದ್ದಾರೆ.

ನಾನು ಮಾಡಲಾಗದ ಕೆಲಸವನ್ನು ಪ್ರಿಯಾಂಕಾ ಮಾಡಿದ್ದಾಳೆ!

ಮಸೂದೆ ಕುರಿತು ಮಾತನಾಡುತ್ತಾ ರಾಹುಲ್​ ಗಾಂಧಿ, ನಾನು ನಿನ್ನ ಪ್ರಿಯಾಂಕಾ ಗಾಂಧಿ ಮಾತನಾಡಿದನ್ನು ನೋಡಿದೆ, ಪ್ರಿಯಾಂಕಾ ಗಾಂಧಿ ಮಾತಿಗೆ ಗೃಹಮಂತ್ರಿ ಅಮಿತ್​ ಶಾ ನಗೆ ಬೀರಿದರು. ನಾನು ಇಪ್ಪತ್ತು ವರ್ಷದಿಂದ ಮಾಡಲಾಗದ ಕೆಲಸವನ್ನು ಪ್ರಿಯಾಂಕಾ ಮಾಡಿದ್ದಾಳೆ. ಮುಂದಿನ ದಿನದಲ್ಲಿ ನಾನು ಕೂಡ ಪ್ರಿಯಾಂಕಾಳ ರೀತಿಯಲ್ಲಿಯೇ ಮಾತನಾಡಲಿದ್ದೆನೆ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ನಿನ್ನೆ ಮಹಿಳಾ ಮೀಸಲಾತಿ ಬಗ್ಗೆ ನಡೆದ ಚರ್ಚೆಯಲ್ಲಿ ಪ್ರಿಯಾಂಕಾ ಗಾಂಧಿ, ನಮ್ಮ ಗೃಹ ಮಂತ್ರಿಗಳ ಯೋಜನೆ ಹೇಗಿದೆ ಎಂದರೆ, ಸಾಕ್ಷಾತ್​ ಆಚಾರ್ಯ ಚಾಣಕ್ಯರೇ ಬದುಕಿದ್ದರೂ ನಿಮ್ಮ ರಾಜಕೀಯ ಕೂಟ ನೀತಿಯನ್ನು ನೋಡಿ ಆಶ್ಚರ್ಯ ಚಕಿತರಾಗುತ್ತಿದ್ದರು ಎಂದು ಹೇಳಿದರು. ಈ ಮಾತನ್ನು ಕೇಳಿಸಿಕೊಂಡ ಅಮಿತ್​ ಶಾ, ಜೋರಾಗಿ ನಕ್ಕಿದರು. ಈಗ ಈ ವಿಡಿಯೋ ಸೋಶಿಯಲ್​ ಮೀಡಿಯಾನಲ್ಲಿ ಫುಲ್​ ವೈರಲ್​ ಆಗುತ್ತಿದೆ.
ನನಗೆ ಮತ್ತು ಪ್ರಧಾನಿಗಳಿಗೆ ಹೆಂಡತಿಯ ಚಿಂತೆಯಿಲ್ಲ
ಮಸೂದೆ ಬಗ್ಗೆ ಮಾತನ್ನು ಪ್ರಾರಂಭಿಸಿದ ರಾಹುಲ್​, ಈ ಬಿಲ್​ ಮಹಿಳೆಯರನ್ನು ಸಬಲರನ್ನಾಗಿಸುವ ಮಸೂದೆಯಲ್ಲ, ಬದಲಾಗಿ ಭಾರತದ ಚುನಾವಣಾ ನಕ್ಷೆಯನ್ನು ಬದಲಿಸುವ ಮಸೂದೆಯಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರ ಜೀವನದಲ್ಲಿ ತಾಯಿ, ಸಹೋದರಿ ಹಾಗೂ ಹೆಂಡತಿ ಪ್ರಮುಖ ಪಾತ್ರವಹಿಸುತ್ತಾರೆ. ಆದರೆ ನನ್ನ ಮತ್ತು ಪ್ರಧಾನಿಗಳ ಜೀವನದಲ್ಲಿ ಈ ಹೆಂಡತಿ ಎನ್ನುವ ಅಂಶವಿಲ್ಲ ಎಂದು ಹೇಳಿದರು. ಪ್ರಾರಂಭದಲ್ಲಿ ಈ ಹೇಳಿಕೆ ಹಾಸ್ಯಮಯವಾಗಿ ಕಂಡರೂ ಈಗ ಇದು ವಿವಾದಾತ್ಮಕ ಹೇಳಿಕೆಯಾಗಿ ರೂಪುಗೊಂಡಿದೆ.

ಈ ಬಿಲ್​ನಿಂದ ಓಬಿಸಿ ಮಹಿಳೆಯರಿಗೆ ನಷ್ಟ

ಈ ಮಸೂದೆ ಜಾರಿಯಾದರೆ ದೇಶದಲ್ಲಿರುವ ಓಬಿಸಿ, ಆದಿವಾಸಿ ಹಾಗೂ ಅಲ್ಪಸಂಖ್ಯಾತ ಮಹಿಳೆಯರ ಪ್ರಾತಿನಿಧ್ಯ ಕಡಿಮೆಯಾಗುವ ಸಧ್ಯತೆಯಿದೆ. ಕಾಂಗ್ರೆಸ್​ ಮಹಿಳಾ ಮೀಸಲಾತಿಯನ್ನು ವಿರೋಧಿಸುವುದಿಲ್ಲ, ಆದರೆ ಇದು ಸಬಲೀಕರಣಕ್ಕಿಂತ ರಾಜಕೀಯ ಸಮೀಕರಣದ ಮಸೂದೆಯಾಗಿದೆ ಎಂದು ರಾಹುಲ್​ ಹೇಳಿದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net