ಪೊಲೀಸರಿಂದ AK-47 ಬಳಕೆ: ಪ್ರತಿಭಟನೆ ನಿಯಂತ್ರಣಕ್ಕೆ ಬಂದೂಕಿನ ಪ್ರಯೋಗದ ಬಗ್ಗೆ ಕಾನೂನು ಹೇಳುವುದೇನು? AK47 Use in Protest Control

ಪ್ರತಿಭಟನೆ ಹತ್ತಿಕ್ಕಲು ಎಕೆ-47 ಬಳಕೆ ಬಗ್ಗೆ ಕಾನೂನು ಏನು ಹೇಳುತ್ತದೆ?
ಪ್ರತಿಭಟನೆ ಹತ್ತಿಕ್ಕಲು ಎಕೆ-47 ಬಳಕೆ ಬಗ್ಗೆ ಕಾನೂನು ಏನು ಹೇಳುತ್ತದೆ?
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆ ನಿಯಂತ್ರಣಕ್ಕೆ ಪೊಲೀಸರಿಂದ AK-47 ಬಳಕೆ
  • ಬಿಹಾರ್​ ಬಂದ್​ ವೇಳೆ ಸಿವಾನ್​ ಜಿಲ್ಲೆಯಲ್ಲಿ AK-47 ರೈಫಲ್​ ಬಳಕೆ
  • ಪ್ರತಿಭಟನೆ ಹತ್ತಿಕ್ಕಲು ಎಕೆ-47 ಬಳಕೆ ಬಗ್ಗೆ ಕಾನೂನು ಏನು ಹೇಳುತ್ತದೆ?
ಬಿಹಾರ್​​: ದೆಹಲಿಯಲ್ಲಿ ನೀಟ್​ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ, ಪ್ರತಿಭಟನೆ ನಡೆದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆಯನ್ನೂ ನೀಡಿ, ಸರ್ಕಾರ ನೂತನ ಪರೀಕ್ಷಾ ಅಕ್ರಮ ಮಸೂದೆಯನ್ನು ಅಂಗೀಕಾರ ಮಾಡಿದೆ.
ಆದರೆ ಈ ಪರೀಕ್ಷಾ ಅಕ್ರಮದ ಕಾವು ಬಿಹಾರ್​ದಲ್ಲಿ ತೀವ್ರಗೊಂಡ ಹಿನ್ನಲೆ ಜುಲೈ.25 ರಂದು ಬಿಹಾರ್​​ ಬಂದ್​ಗೆ ಕರೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸಿವಾನ್​ಲ್ಲಿ ​ ಜಿಲ್ಲೆಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಎಕೆ-47 ಬಂದೂಕಿನ ಪ್ರಯೋಗ ಮಾಡಿದ್ದು, ಮೂರು ಪ್ರತಿಭಟನಾಕಾರರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಹಾಗೆಯೇ ಈ ಎಕೆ-47 ಮೂಲಕ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ ಪೊಲೀಸರು ಈ ರೀತಿ ಎಕೆ-47 ರೈಫಲ್​​ಅನ್ನು ಬಳಸಬಹುದೇ? (AK47 Use in Protest Control) ಎಂಬ ಚರ್ಚೆ ಜೋರಾಗಿದ್ದು, ಕಾನೂನು ಈ ಬಗ್ಗೆ ಏನನ್ನು ಹೇಳುತ್ತದೆ ಎಂದು ಇಂದು ತಿಳಿಯೋಣ.
ಪೊಲೀಸರು ಎಕೆ-47 ಬಳಸಬಹುದೇ?
ಹೌದು. ಭಾರತದ ಕೆಲ ರಾಜ್ಯಗಳಲ್ಲಿ ಪೊಲೀಸರು ಎಕೆ-47 ಅನ್ನು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಎಕೆ-47 ಹಾಗೂ ಮೊದಲಾದ ಆಧುನಿಕ ರೈಫಲ್​ಗಳನ್ನು ಬಳಸಲು ಅವಕಾಶವಿದೆ. ಆದರೆ ಈ ಬಂದೂಕನ್ನು ಸಾಮಾನ್ಯ ಪೊಲೀಸರ ಬದಲು, ವಿಶೇಷ ಕಾರ್ಯ ಪಡೆ (STF), ವಿಶೇಷ ಕಾರ್ಯಾಚರಣೆ ಗುಂಪು (SOP), ನಕ್ಸಲ್​ ವಿರೋಧಿ ಗುಂಪು, ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿಗಳು ಈ ರೈಫಲ್​ ಅನ್ನು ಬಳಸುತ್ತಾರೆ.

ಪ್ರತಿಭಟನಾಕಾರರ ಮೇಲೆ ಗುಂಡನ್ನು ಹಾರಿಸಬಹುದೇ?

ಇದಕ್ಕೆ ಉತ್ತರ ಸ್ವಲ್ಪ ಕಠಿಣವಾಗಿದೆ. ಭಾರತ ಸಂವಿಧಾನದ ಪ್ರಕಾರ ಆರ್ಟಿಕಲ್​ 19 ರ ಪ್ರಕಾರ ಪ್ರತಿ ಪ್ರಜೆ ಸರ್ಕಾರದ ವಿರುದ್ಧ ತನ್ನ ವಿರೋಧವನ್ನು ವ್ಯಕ್ತ ಪಡಿಸುವ ಹಕ್ಕನ್ನು ಹೊಂದಿದ್ದಾರೆ. ಆದರೆ ಈ ವಿರೋಧ ದೇಶ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಆಗಿರಬಾರದು.
ಅದೇ ರೀತಿ ಬೃಹತ್​ ಸಂಖ್ಯೆಯಲ್ಲಿ ನಡೆಯುವ ಪ್ರತಿಭಟನೆಗಳು ಶಾಂತಯುತವಾಗಿ ನಡೆದರೆ ಅಲ್ಲಿ, ಪೊಲೀಸರು ಲಾಠಿ ಚಾರ್ಜ್​, ಅಶ್ರುವಾಯು ಪ್ರಯೋಗ, ಜಲ ಫಿರಂಗಿ ಪ್ರಯೋಗ, ಗುಂಡಿನ ಪ್ರಯೋಗ ಯಾವುದನ್ನೂ ಕೂಡ ಮಾಡುವಂತಿಲ್ಲ.
ಆದರೆ. ಪ್ರತಿಭಟನೆ ಕೈಮೀರಿ ಹೋದರೆ, ಶಾಂತಯುತ ಹೋರಾಟ ಶಸ್ತ್ರ ಸಜ್ಜಿತ ಹೋರಾಟವಾಗಿ ಬದಲಾದ ಪಕ್ಷದಲ್ಲಿ, ಭಾರತದ ಸಾರ್ವಭೌಮತೆಯನ್ನು ಉಳಿಸುವ ಸಲುವಾಗಿ ಭದ್ರತಾ ಸಿಬ್ಬಂದಿಗಳು ಗುಂಡನ್ನು ಹಾರಿಸಲು ಅವಕಶವಿದೆ. ಆದರೆ ಇದಕ್ಕೆ ಹಲವು ನೀತಿ ನಿಯಮಗಳಿವೆ.
ನಿಯಮಗಳೇನು?
ಶಾಂತಯುತ ಹೋರಾಟ ತೀವ್ರವಾದ ಕೂಡಲೇ ಭದ್ರತಾ ಸಿಬ್ಬಂದಿಗಳು ಬಂಧೂಕ ಅನ್ನು ಬಳಸಲು ಸಾಧ್ಯವಿಲ್ಲ. ಮೊದಲು ಔಪಚಾರಿಕವಾಗಿ ಎಚ್ಚರಿಕೆ ನೀಡಬೇಕು. ನಂತರ ಅವರ ನಾಯಕರಲ್ಲಿ ಮನವಿ ಮಾಡಬೇಕು. ಆದರೂ ಮಾತನ್ನು ಕೇಳದಿದ್ದರೆ ಲಾಠಿ ಚಾರ್ಜ್​ ಮಾಡಬೇಕು.
ಲಾಠಿ ಚಾರ್ಜ್​ಗೂ ಬಗ್ಗದಿದ್ದರೆ, ಆಶ್ರುವಾಯು ಹಾಗೂ ಜಲ ಫಿರಂಗಿಗಳನ್ನು ಬಳಸಬೇಕು. ಆಗಲೂ ಗುಂಪಿನ ಆಟಾಟೋಪ ನಿಲ್ಲದಿದ್ದರೆ ಪೆಲೆಟ್​ ಗನ್​ ಬಳಸಬೇಕು. ನಂತರು ಗುಂಪಿನ ಉದ್ವಿಗ್ನತೆ ಕಡಿಮೆ ಆಗದ ಪಕ್ಷದಲ್ಲಿ ಬಂದೂಕನ್ನು ಬಳಸಲಾಗುತ್ತದೆ.
ಅದರಲ್ಲೂ ಬಂದೂಕನ್ನು ನೇರವಾಗಿ ಹಣೆ ಅಥವಾ ಎದೆಗೆ ಹೊಡೆಯುವಂತಿಲ್ಲ. ಮೊದಲು ಕೊನೆಯ ಎಚ್ಚರಿಕೆ ಎಂದು ಹೇಳಿ, ಮೂರು ಸುತ್ತು ಗುಂಡುಗಳನ್ನು ಗಾಳಿಯಲ್ಲಿ ಸಿಡಿಸಬೇಕು. ನಂತರ ಕಾಲಿಗೆ ಆನಂತರ ಉದ್ವಿಗ್ನ ಗುಂಪಿನತ್ತ ನೇರವಾಗಿ ಗುಂಡನ್ನು ಚಲಾಯಿಸಬಹುದು ಎಂದು ಪ್ರತಿಭಟನಾ ನಿಯಂತ್ರಣದ ಮ್ಯಾನವಲ್​ ತಿಳಿಸುತ್ತದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net