ಅಭಿಷೇಕ್ ಬೆನ್ನಲ್ಲೆ ಕಲ್ಯಾಣ್​ ಬ್ಯಾನರ್ಜಿ ಮೇಲೆ ಹಲ್ಲೆ: ಸಂಸದನ ತಲೆ ಒಡೆದ ಕಿಡಿಗೇಡಿಗಳು; ಇದೆಲ್ಲಾ BJP ಕುತಂತ್ರ TMC ಆರೋಪ! Kalyan Banerjee Attacked

ಕಲ್ಯಾಣ್​ ಬ್ಯಾನರ್ಜಿ ತಲೆ ಒಡೆದ ಕಿಡಿಗೇಡಿಗಳು
ಕಲ್ಯಾಣ್​ ಬ್ಯಾನರ್ಜಿ ತಲೆ ಒಡೆದ ಕಿಡಿಗೇಡಿಗಳು
Published on

ಪ್ರಮುಖ ಮುಖ್ಯಾಂಶಗಳು

  • ನಿನ್ನೆ ಅಭಿಷೇಕ್​ ಬ್ಯಾನರ್ಜಿ ಮೇಲೆ ಕಲ್ಲು ತೂರಾಟ
  • ಇಂದು ಕಲ್ಯಾಣ್​ ಬ್ಯಾನರ್ಜಿ ತಲೆ ಒಡೆದ ಕಿಡಿಗೇಡಿಗಳು
  • ಇವೆಲ್ಲಾ ಬಿಜೆಪಿ ಪಿತೂರಿ ಎಂದ ಟಿಎಂಸಿ ಕಾರ್ಯಕರ್ತರು
ಪಶ್ಚಿಮ ಬಂಗಾಳ: ಶನಿವಾರ (ಮೇ.30) ಟಿಎಂಸಿ ಸಂಸದ ಅಭಿಷೇಕ್​ ಬ್ಯಾನರ್ಜಿ ಮೇಲಿನ ಹಲ್ಲೆ ಬೆನ್ನಲ್ಲೆ ಇಂದು (ಭಾನುವಾರ, ಮೇ.31) ಮತ್ತೊಮ್ಮ ಟಿಎಂಸಿ ಸಂಸದ ಕಲ್ಯಾಣ್​ ಬ್ಯಾನರ್ಜಿ (Kalyan Banerjee Attacked) ಮೇಲೆ ದಾಳಿ ನಡೆದಿದ್ದು, ತಲೆಗೆ ತೀವ್ರ ಏಟಾಗಿದೆ ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ, ಟಿಎಂಸಿ ಪಕ್ಷದ ಕಾರ್ಯಕರ್ತರ ಹಾಗೂ ನಾಯಕರ ಮೇಲೆ ಆಡಳಿತ ಪಕ್ಷ ಸುಳ್ಳು ಪ್ರಕರಣ ದಾಖಲಿಸುತ್ತಿದೆ ಎಂದು ಆರೋಪಿಸಿ ಧರಳಿ ನಿರತರಾಗಿದ್ದರು. ಮಾಹಿತಿ ಪ್ರಕಾರ, ಧರಣಿಗೆ ಕುಳಿತಿದ್ದ ಟಿಎಂಸಿ ಪಕ್ಷದವರು ತಮ್ಮ ಮನವಿ ಪತ್ರವನ್ನು ಚಂಡಿತಾಲಾ ಪೊಲೀಸ್ ಠಾಣೆಗೆ ಸಲ್ಲಸಲು ಹೋದಾಗ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ತಿಳಿದು ಬಂದಿದೆ.

ಏಕಾಏಕಿ ದಾಳಿ

ಟಿಎಂಸಿ ಪಕ್ಷದವರು ಹೇಳುತ್ತಿರುವ ಪ್ರಕಾರ, ಧರಳಿಯಲ್ಲಿ ನಿರತರಾಗಿದ್ದಾಗ ಬಿಜೆಪಿ ಕಾರ್ಯಕರ್ತರು ನಮ್ಮನ್ನು ಸುತ್ತುವರಿದರು. ನಂತರ ಅವರು ಕಲ್ಯಾಣ್​ ಬ್ಯಾನರ್ಜಿ ಕಳ್ಳ-ಕಳ್ಳ ಎಂದು ಘೋಷಣೆ ಕೂಗಲಾರಂಭಿಸಿದರು, ನಂತರ ಒಂದೇ ಸಮನೇ ನಮ್ಮ ಮೇಲೆ ಹಲ್ಲೆಗೆ ಮುಂದಾದರು ಎಂದು ಹೇಳಿದ್ದಾರೆ.
ಸದ್ಯ ಪರಿಸ್ಥಿತಿ ಉದ್ವಿಗ್ನ ಸ್ಥಿತಿಯಲ್ಲಿದ್ದು, ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಹಾಗೆಯೇ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸುವ ಕೆಲಸ ಭರದಿಂದ ಸಾಗಿದೆ ಎಂದು ಬಂಗಾಳ ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ.

ಅಭಿಷೇಕ್​ ಬ್ಯಾನರ್ಜಿ ಮೇಲೆ ದಾಳಿ

ಶನಿವಾರ (ಮೇ.30) ದಕ್ಷಿಣದ 24 ಪರಣಗಣದ ಸೋನರ್​ಪುರ್​ನಲ್ಲಿ ಟಿಎಂಸಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್​ ಬ್ಯಾನರ್ಜಿ ಮೇಲೆ ಮೊಟ್ಟೆ, ಕಲ್ಲಿನಿಂದ ದಾಳಿ ನಡೆದಿದೆ.
ಚುನಾವಣಾ ನಂತರ ನಡೆದ ಹಿಂಸಾಚಾರದಲ್ಲಿ ತೊಂದರೆಗೆ ಒಳಗಾದವರನ್ನು ನೋಡಲು ಹೋದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಪೊಲೀಸರು ವಶಕ್ಕೆ ಪಡೆದ ಬಗ್ಗೆ ವರದಿಯಾಗಿದೆ.
ಇದೊಂದು ಬಿಜೆಪಿ ಪ್ರಾಯೋಜಿತ ಕೊಲೆಯತ್ನವಾಗಿದೆ. ನಾನು ಹೆಲ್ಮೆಟ್​ ಧರಿಸದೆ ಹೋಗದಿದ್ದರೆ ಹೆಣವಾಗುತ್ತಿದ್ದೆ, ನಾನು ಈ ಘಟನೆಯನ್ನು ನ್ಯಾಯಲಯ ಮತ್ತು ರಾಜ್ಯಪಾಲರ ಮುಂದೆ ಇಡಲಿದ್ದೆನೆಂದು ಅಭಿಷೇಕ್​ ಬ್ಯಾನರ್ಜಿ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net