ಭಾರತೀಯ ಸೇನೆಗೆ ಹೊಸ ಬಾಸ್: ದೇಶದ ನೂತನ ಸಿಡಿಎಸ್ ಆಗಿ ಜನರಲ್ ಎನ್. ಎಸ್. ರಾಜಾ ಸುಬ್ರಮಣಿ ಅಧಿಕಾರ ಸ್ವೀಕಾರ! General NS Raja Subramani

ನೂತನ ಸಿಡಿಎಸ್ (CDS)  ಜನರಲ್ ಎನ್. ಎಸ್. ರಾಜಾ ಸುಬ್ರಮಣಿ
ನೂತನ ಸಿಡಿಎಸ್ (CDS) ಜನರಲ್ ಎನ್. ಎಸ್. ರಾಜಾ ಸುಬ್ರಮಣಿ
Published on

ಪ್ರಮುಖ ಮುಖ್ಯಾಂಶಗಳು

  • ನೂತನ ಸಿಡಿಎಸ್ (CDS) ಆಗಿ ಜನರಲ್ ಎನ್. ಎಸ್. ರಾಜಾ ಸುಬ್ರಮಣಿ ಆಯ್ಕೆ
  • ಸೇನೆಯಲ್ಲಿ ತಂತ್ರಜ್ಞಾವನ್ನು ಅಭಿವೃದ್ಧಿ ಪಡಿಸುತ್ತೆನೆ
  • ರಾಷ್ಟ್ರ ರಕ್ಷಣೆ ಪ್ರಧಾನ ಗುರಿ
ನವದೆಹಲಿ: ಭಾರತ ಸಶಸ್ತ್ರ ಪಡೆಗಳಲ್ಲಿನ ಅತ್ಯುನ್ನತ ಸಿಡಿಎಸ್​​ ಪದವಿಯಿಂದ ಜನರಲ್​ ಅನಿಲ್​ ಚೌಹಾಣ್​ ನಿವೃತ್ತರಾದ ಬಳಿಕ ಈಗ ಜನರಲ್​ ಎನ್​. ಎಸ್​. ರಾಜಾ ಸುಬ್ರಮಣಿ (General NS Raja Subramani) ಭಾನುವಾರ (ಮೇ.31) ರಂದು ದೇಶದ ನೂತನ ಸಿಡಿಎಸ್​​ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ತಂತ್ರಜ್ಞಾನದೊಂದಿಗೆ ಅಭಿವೃದ್ಧಿ ಸಾಧಿಸುತ್ತವೆ!

ಅಧಿಕಾರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಸಿಡಿಎಸ್​ ಜನರಲ್​ ಎನ್​. ಎಸ್​. ರಾಜಾ ಸುಬ್ರಮಣಿ, ಇದು ತಂತ್ರಜ್ಞಾನದ ಕಾಲವಾಗಿದ್ದು, ಅದನ್ನು ಬಳಸಿಕೊಂಡು ನಾವು ಸೇನೆಯನ್ನು ಅಭಿವೃದ್ಧಿ ಪಡಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಬೇಕಾದರೆ ಸೇನೆ ನಾವಿನ್ಯತೆಯನ್ನು ಸಾಧಿಸಿರಬೇಕಾಗುತ್ತದೆ. ಮಿಲಿಟರಿ ಶಿಕ್ಷಣ, ತರಬೇತಿ, ಕೆಲಸ ಇವುಗಳಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಗೊಳಿಸುವುದು ನನ್ನ ಮೊದಲ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಿಡಿಎಸ್​ ಹುದ್ದೆಗೆ ಬಲವಾದ ಅಡಿಪಾಯ ಹಾಕಿದ ದಿ. ಜನರಲ್​ ಬಿಪಿನ್​ ರಾವತ್​ ಹಾಗೂ ನಿವೃತ್ತ ಜನರಲ್​ ಅನಿಲ್​ ಚೌಹಾಣ್​ ಅವರಿಗೆ ನಾನು ಅಭಿನಂದಿಸುತ್ತೆನೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ಕ್ರಿಯಾಶೀಲನಾಗುತ್ತೆನೆಂದು ಸಿಡಿಎಸ್​ ಜನರಲ್​ ಎನ್​. ಎಸ್​. ರಾಜಾ ಸುಬ್ರಮಣಿ ಹೇಳಿದ್ದಾರೆ.

ಸಿಡಿಎಸ್​ ಹುದ್ದೆ ಬಗ್ಗೆ

ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅತ್ಯಂತ ಉನ್ನತ ಮತ್ತು ಗೌರವಾನ್ವಿತ ಹುದ್ದೆಯೆಂದರೆ ಅದು ಸಿಡಿಎಸ್ (CDS - Chief of Defence Staff) ಅಥವಾ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಹುದ್ದೆ. ಭಾರತೀಯ ಭೂಸೇನೆ (Army), ನೌಕಾಸೇನೆ (Navy) ಮತ್ತು ವಾಯುಸೇನೆ (Air Force) ಎಂಬ ಮೂರೂ ಸಶಸ್ತ್ರ ಪಡೆಗಳ ನಡುವೆ ಉತ್ತಮ ಸಮನ್ವಯತೆ ಮತ್ತು ಒಗ್ಗಟ್ಟನ್ನು ಸಾಧಿಸುವ ಉದ್ದೇಶದಿಂದ ಈ ಶಕ್ತಿಶಾಲಿ ಹುದ್ದೆಯನ್ನು ಸೃಷ್ಟಿಸಲಾಗಿದೆ.
ಸಿಡಿಎಸ್ ಅಧಿಕಾರಿಗಳು ರಕ್ಷಣಾ ಸಚಿವರ ಪ್ರಧಾನ ರಕ್ಷಣಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಹೊಸದಾಗಿ ರಚಿಸಲಾದ ಮಿಲಿಟರಿ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಈ ಹುದ್ದೆಯನ್ನು ಅಲಂಕರಿಸುವ ಅಧಿಕಾರಿಗಳು, ಮೂರೂ ಪಡೆಗಳ ಮುಖ್ಯಸ್ಥರಿಗಿಂತ ಹಿರಿತನದಲ್ಲಿ ಸಮಾನರಾಗಿದ್ದರೂ, ರಕ್ಷಣಾ ಇಲಾಖೆಯ ಪ್ರಮುಖ ನಿರ್ಧಾರಗಳಲ್ಲಿ ಇವರ ಪಾತ್ರ ಅತ್ಯಂತ ನಿರ್ಣಾಯಕವಾಗಿರುತ್ತದೆ.
ಸೇನೆಗೆ ಸಂಬಂಧಿಸಿದ ಜಂಟಿ ಕಾರ್ಯಾಚರಣೆಗಳು, ಶಸ್ತ್ರಾಸ್ತ್ರಗಳ ಖರೀದಿ ಮತ್ತು ರಕ್ಷಣಾ ತಂತ್ರಜ್ಞಾನಗಳ ಆಧುನೀಕರಣದ ಉಸ್ತುವಾರಿಯನ್ನು ಸಿಡಿಎಸ್ ನೋಡಿಕೊಳ್ಳುತ್ತಾರೆ. ದೇಶದ ಮೊದಲ ಸಿಡಿಎಸ್ ಆಗಿ ಜನರಲ್ ಬಿಪಿನ್ ರಾವತ್ ಅವರು ಸೇವೆ ಸಲ್ಲಿಸಿದ್ದರು. ಭಾರತದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಮೂರೂ ಪಡೆಗಳ ಶಕ್ತಿಯನ್ನು ಒಗ್ಗೂಡಿಸಿ ಶತ್ರುಗಳ ವಿರುದ್ಧ ಏಕಕಾಲದಲ್ಲಿ ಹೋರಾಡುವಂತೆ ಸಿದ್ಧಗೊಳಿಸಲು ಈ ಹುದ್ದೆ ಭಾರತೀಯ ಸೇನೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net