ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದರು. ವಿಚಾರಣೆಯ ಸಮಯದಲ್ಲಿ, ಆತ ತಾನು 2008ರ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಆದರೆ, ಆತನ ಮಾತಿನಲ್ಲಿನ ಸಂಶಯದಿಂದ ಪೊಲೀಸರು ದಾಖಲೆಗಳನ್ನು ಪರಿಶೀಲಿಸಿದಾಗ, ಆತನ ಐಎಎಸ್ ಪದವಿಯು ಸಂಪೂರ್ಣ ಸುಳ್ಳು ಎಂದು ದೃಢಪಟ್ಟಿದೆ. ಪೊಲೀಸರು ಆತನ ಮನೆಯಲ್ಲಿ ಐಎಎಸ್, ಉಪ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಎಂಬ ಬಿರುದುಗಳನ್ನು ಹೊಂದಿರುವ ನಾಮಫಲಕವನ್ನು ಸಹ ವಶಪಡಿಸಿಕೊಂಡಿದ್ದಾರೆ.