ದಿನಪತ್ರಿಕೆಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಪಂಚದಾದ್ಯಂತ ಪ್ರತಿಗಾಮಿ ವಿಚಾರಗಳು ಬೆಳೆಯುತ್ತಿವೆ . ಆದರೆ ತಮಿಳುನಾಡಿನಲ್ಲಿ ಪೆರಿಯಾರ್ ಸಿದ್ಧಾಂತ ಸಾಂಸ್ಥಿಕೀಕರಣಗೊಂಡ ಕಾರಣ ಬಿಜೆಪಿ ನೆಲೆಯೂರಲು ಸಾಧ್ಯವಾಗಿಲ್ಲ. ಪೆರಿಯಾರ್ ದೇವರು ಇಲ್ಲ ಎಂದು ಹೇಳಿದ್ದು, ದೇವರ ಮೇಲಿನ ನಂಬಿಕೆಯ ಮೇಲೆ ದಾಳಿ ಮಾಡಲು ಅಲ್ಲ, ಬದಲಾಗಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ಶೋಷಣೆಗೆ ಒಳಗಾಗದಂತೆ ಶೋಷಿತರನ್ನು ರಕ್ಷಿಸಲು ಎಂದು ತಮಿಳರು ಅರ್ಥೈಸಿಕೊಳ್ತಾರೆ ಎಂದಿದ್ದಾರೆ.