ದೀರ್ಘಾವಧಿಯ ನಂತರ ಅಧ್ಯಯನ ಮಾಡುವುದು ಬಹಳಷ್ಟು ಜನರಿಗೆ ಕಷ್ಟವಾಗಿರಬಹುದು
ಕೆಲವು ಬುದ್ಧಿವಂತ ಹಂತಗಳನ್ನು ಅನುಸರಿಸಿದಾಗ ಮತ್ತೆ ನಿಮ್ಮ ದಿನಚರಿಯನ್ನು ಪ್ರಾರಂಭಿಸಬಹುದು
ತುಂಬಾ ದಿನಗಳ ನಂತರ ಓದಲು ಕುಳಿತವರಿಗೆ ಓದಬೇಕೆಂಬ ಹಂಬಲ ಇರುವುದಿಲ್ಲ
Study Routine : ದೀರ್ಘಾವಧಿಯ ನಂತರ ಅಧ್ಯಯನ ಮಾಡುವುದು ಬಹಳಷ್ಟು ಜನರಿಗೆ ಕಷ್ಟವಾಗಿರಬಹುದು. ಆದರೆ ಕೆಲವು ಬುದ್ಧಿವಂತ ಹಂತಗಳನ್ನು ಅನುಸರಿಸಿದಾಗ ಮತ್ತೆ ನಿಮ್ಮ ದಿನಚರಿಗಳನ್ನು ಸರಾಗವಾಗಿ ಪ್ರಾರಂಭಿಸಬಹುದು. ಓದುವಾಗ ನೀವು ಹೇಗೆ ಗಮನ ಕೊಡುತ್ತೀರಿ, ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತೀರಿ ಎಂಬುದರ ಮೇಲೆ ರಚನೆಯಾಗುತ್ತದೆ.
ತುಂಬಾ ದಿನಗಳ ನಂತರ ಓದಲು ಕುಳಿತವರಿಗೆ ಓದಬೇಕೆಂಬ ಹಂಬಲ ಇರುವುದಿಲ್ಲ. ತಮ್ಮ ಉದಾಸೀನದಿಂದ ಮತ್ತೊಂದು ದಿನ ಓದೋಣ ಎಂದು ಯೋಚಿಸುತ್ತಾರೆ. ಹಾಗಾಗಿ ಮೊದಲಿಗೆ ನೀವು ಸಣ್ಣ ಅಧ್ಯಯನಗಳೊಂದಿಗೆ ಪ್ರಾರಂಭಿಸಿ 20-30 ನಿಮಿಷಗಳ ಕಾಲ ಕೂತು ಓದಲು ಪ್ರಾರಂಭಿಸಿ. ಇದು ಮೆದುಳಿಗೆ ಯಾವುದೇ ಒತ್ತಡವನ್ನು ನೀಡದೇ, ನಿಮ್ಮನ್ನು ಓದಲು ಪ್ರೇರೇಪಿಸುತ್ತದೆ.
2. ಸರಳ ಅಧ್ಯಯನ ಯೋಜನೆಯನ್ನು ಮಾಡಿ
ಮೊದಲು ಒಂದು ವೇಳಾಪಟ್ಟಿಯನ್ನು ರಚಿಸಿಕೊಳ್ಳಿ. ಅಗತ್ಯ ವಿಷಯಗಳನ್ನು ಮಾತ್ರ ಅಧ್ಯಯನ ಮಾಡಿ. ಆರಂಭದಲ್ಲೇ ಹೆಚ್ಚು ಯೋಜನೆ ಹಾಕಿಕೊಳ್ಳುವುದು ಮೆದುಳಿನ ಮೇಲೆ ಒತ್ತಡ ಉಂಟಾಗುತ್ತದೆ.
3. ಈಗಾಗಲೇ ಕಲಿತಿರುವುದನ್ನು ಪುನಃ ಅಭ್ಯಾಸ ಮಾಡಿ
ಬಹಳ ದಿನಗಳ ನಂತರ ಅಭ್ಯಾಸ ಮಾಡಲು ಪ್ರಾರಂಭಿಸುವವರು ಹೊಸ ಅಧ್ಯಯನಗಳಿಗೆ ತಕ್ಷಣವೇ ಧಾವಿಸಬೇಡಿ. ಬದಲಿಗೆ ನೀವು ಈಗಾಗಲೇ ಓದಿರುವ ಅಧ್ಯಯನಗಳನ್ನು ಪುನಃ ಓದಿ ಇದು ಓದಲು ಆಸಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
4. ನಿಮ್ಮ ಸುತ್ತಲಿನ ಗೊಂದಲಗಳನ್ನು ತೆಗೆದುಹಾಕಿ
ಮೊದಲಿಗೆ ನಿಮ್ಮ ಬಳಿ ಇರುವಂತಹ ಮೊಬೈಲ್ನ್ನು ತೆಗೆದು ಪಕ್ಕಕ್ಕೆ ಇಡಿ. ನಂತರ ನಿಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಶಾಂತವಾಗಿರುವ ಪ್ರದೇಶದ ಮೂಲೆಯಲ್ಲಿ ಕೂತು ಓದಲು ಪ್ರಾರಂಭಿಸಿ ಇದು ಓದಲು ಆಸಕ್ತಿಯನ್ನು ಹೆಚ್ಚಿಸುತ್ತದೆ.
5. ಅಭ್ಯಾಸ ಹಾಳೆಯನ್ನು ತೆಗೆದುಕೊಳ್ಳಿ
ನೀವು ಎಲ್ಲಿ ಓದುವುದನ್ನು ನಿಲ್ಲಿಸಿದಿರಿ. ಯಾವುದಕ್ಕೆ ಹೆಚ್ಚಿನ ಗಮನವನ್ನು ನೀಡಬೇಕು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ. ಓದಿದ ವಿಷಯದ ಬಗ್ಗೆ ನಿಮಗೆ ನೀವೇ ಪರೀಕ್ಷೆಯನ್ನು ಒಡ್ಡಿಕೊಳ್ಳಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
6. ನಿಮ್ಮೊಂದಿಗೆ ತಾಳ್ಮೆಯಿಂದಿರಿ
ಮೊದಲಿಗೆ ನಿಧಾನವಾಗಿ ಕಲಿಯುತ್ತಿದ್ದೇವೆ ಅನಿಸುವುದು ಸಹಜ. ಆದರೆ, ನೀವು ಯೋಜನೆ ಮಾಡಿಕೊಂಡಿರುವ ದಿನಚರಿಯನ್ನು ಪಾಲಿಸುವುದು ಹಾಗೂ ಇತರರ ಜೊತೆಗೆ ನಿಮ್ಮನ್ನು ಹೋಲಿಸಿಕೊಳ್ಳುವುದನ್ನು ತಪ್ಪಿಸಿದರೆ, ಕೆಲವೇ ದಿನಗಳಲ್ಲಿ ಮೊದಲಿನ ರೂಪಕ್ಕೆ ಮರಳುತ್ತೀರಿ. (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.