ಆಹಾರವೇ ಆರೋಗ್ಯ ಎಂಬ ನಾಣ್ಣುಡಿಯಂತೆ ದೇಹದಲ್ಲಿ ಏನೇ ಬದಲಾವಣೆಯಾಗಬೇಕಾದರೆ ಮೊದಲು ಆಹಾರ ಶೈಲಿಯಲ್ಲಿ ಬದಲಾವಣೆ ತರಬೇಕು. ತರಕಾರಿಗಳು, ದ್ವಿದಳ ಧಾನ್ಯಗಳು, ಧಾನ್ಯಗಳು, ಬೀಜಗಳು, ಆಲಿವ್ ಎಣ್ಣೆ ಹಾಗೂ ಪ್ರೋಟೀನ್ಗಳ ಸೇವನೆ HbA1c ಅನ್ನು ಕಡಿಮೆ ಮಾಡುತ್ತವೆ. ಈ ರೀತಿಯ ತಿನ್ನುವ ಶೈಲಿಯು ಊಟದಿಂದ ಸಕ್ಕರೆ ಬಿಡುಗಡೆ ನಿಧಾನಗೊಳಿಸಿ ಶಕ್ತಿಯನ್ನು ಸ್ಥಿರಗೊಳಿಸುತ್ತದೆ. ಕರುಳಿನ ಸೂಕ್ಷ್ಮಜೀವಿಯನ್ನು ಪೋಷಿಸಿ, ಉರಿಯೂತವನ್ನು ಕಡಿಮೆ ಮಾಡುತ್ತದೆ. ತಿನ್ನುವ ತಟ್ಟೆಯಲ್ಲಿ ಅರ್ಧದಷ್ಟು ತರಕಾರಿಗಳನ್ನು ಸೇರಿಸಿಕೊಳ್ಳುವುದು, ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳ ಬದಲಿಗೆ ಧಾನ್ಯಗಳನ್ನು ಬಳಸುವುದು, ಆಲಿವ್ ಅಥವಾ ಸಾಸಿವೆ ಎಣ್ಣೆಯಿಂದ ಅಡುಗೆ ಮಾಡುವ ಮೂಲಕ ಸಕ್ಕರೆ ಕಾಯಿಲೆಯ ಅಪಾಯವನ್ನು ತಪ್ಪಿಸಬಹುದು.